ಎದೆಹಾಲು ಗಂಟಲಲ್ಲಿ ಸಿಲುಕಿ 50 ದಿನ ಪ್ರಾಯದ ಮಗು ಮೃತ್ಯು

ಕುಂಬಳೆ: ಎದೆಹಾಲು ಗಂಟಲಲ್ಲಿ ಸಿಲುಕಿದ ಹಿನ್ನೆಲೆಯಲ್ಲಿ 50ದಿವಸ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಮೊಗ್ರಾಲ್, ಪೇರಾಲು ಮಡಿಮೊಗರು ನಿವಾಸಿ ಮುಹಮ್ಮದ್ ರಾಹಿದ್- ಮರಿಯಮ್ಮತ್ ಸಾಬಿರ ದಂಪತಿ ಪುತ್ರ ಲಸಿನ್ ಇಮಾತ್ ಮೃತಪಟ್ಟ ಮಗು. ನಿನ್ನೆ ರಾತ್ರಿ ಘಟನೆ ನಡೆದಿದೆ. ಅಸ್ವಸ್ಥ ಸ್ಥಿತಿಯಲ್ಲಿ ಮಗುವನ್ನು ಜನರಲ್ ಆಸ್ಪತ್ರೆಗೆ ತಲುಪಿಸಲಾಯಿತಾದರೂ ಜೀವ ರಕ್ಷಿಸಲು ಸಾಧ್ಯವಾಗಲಿಲ್ಲ. ಮೃತದೇಹವನ್ನು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ಮಗು ಸಹೋದರ ಸಯಾನ್ ಹಾಗೂ ತಂದೆ, ತಾಯಿಯನ್ನು ಅಗಲಿದೆ.

ಇತ್ತೀಚೆಗೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ಇದಕ್ಕೆ ಸಮಾನ ರೀತಿಯಲ್ಲಿ ಮಗುವೊಂದು ಮೃತಪಟ್ಟಿತ್ತು. ಬೇಕಲ್ ಹದ್ದದ್ ನಗರದ ರಸೀನ ಮಂಜಿಲ್‌ನ ಕೆ. ಮುಹಮ್ಮದ್ ಹನೀಫರ ಪುತ್ರ ಲಿದಾನ್ ಫಾರ್ಮಿ ಮೃತಪಟ್ಟ ಮಗುವಾಗಿತ್ತು.

RELATED NEWS

You cannot copy contents of this page