ಇನ್ನು ನಾವು ಹೇಳುತ್ತೇವೆ, ನೀವು ಕೇಳಿ’ ಪ್ಲಸ್ವನ್ ವಿದ್ಯಾರ್ಥಿಗಳಿಗೆ ಸೀನಿಯರ್ಗಳಿಂದ ಮಿಠಾಯಿ ಬೆದರಿಕೆ
ಕಾಸರಗೋಡು: ಇನ್ನು ನಾವು ಹೇಳುತ್ತೇವೆ ಅದನ್ನು ನೀವುಕೇಳಿ ಅನುಸರಿಸಬೇಕು ಇದು ಪ್ಲಸ್ವನ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ನೀಡಿರುವ ಬೆದರಿಕೆ. ಅಂದರೆ ಈ ಬೆದರಿಕೆಯನ್ನು ನೇರವಾಗಿ ಬಾಯಿಮಾತಿನಿಂದ ನೀಡಲಾಗಿಲ್ಲ. ಅದನ್ನು ಪ್ಲಸ್ವನ್ ವಿದ್ಯಾರ್ಥಿಗಳಿಗೆ ವಿತರಿಸಲು ತರಲಾದ ಚಾಕ್ಲೆಟ್ ಕವರ್ನಲ್ಲಿ ಮುದ್ರಿಸಲಾಗಿದೆ.
ಇದು ನಡೆದಿರುವುದು ಕಾಸರಗೋಡು ತಳಂಗರೆ ಸರಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಈ ಶಾಲೆಗೆ ಕಾರೊಂದರಲ್ಲಿ ಬರುತ್ತಿದ್ದ ಕೆಲವು ವಿದ್ಯಾರ್ಥಿಗಳು, ಪೊಲೀಸರನ್ನು ಕಂಡು ಹೆದರಿ ಕಾರನ್ನು ಅಲ್ಲೇ ಬಿಟ್ಟು ಜಾಗ ಖಾಲಿಮಾಡಿದ್ದರು. ಶಂಕೆಗೊಂಡ ಪೊಲೀಸರು ಆ ಕಾರನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಮಿಠಾಯಿ ಪ್ಯಾಕೆಟ್ಗಳು ಪತ್ತೆಯಾಗಿದೆ. ಆ ಪ್ಯಾಕೆಟ್ಗಳನ್ನು ಪೊಲೀಸರು ಪರಿಶೀಲಿಸಿದಾಗ ಇತ್ತೀಚೆಗಷ್ಟೇ ಬಿಡುಗಡೆಗೊಂಡು ಮೆಘಾಹಿಟ್ ಆದ ಸೂಪರ್ ಸ್ಟಾರ್ ಮೋಹನ್ಲಾಲ್ ನಟಿಸಿದ ತುಡರುಂ ಎಂಬ ಮಲೆಯಾಳಂ ಸಿನಿಮಾದ ಕೆಲವೊಂದು ಸಂಭಾಷಣೆ ಗಳನ್ನು ಬರೆದ ಸಿಕ್ಕರ್ಗಳನ್ನು ಆ ಪ್ಯಾಕೆಟ್ಗಳ ಮೇಲೆ ಲಗತ್ತಿಸಲಾಗಿತ್ತು. ಇನ್ನು ನಾವು ಹೇಳುತ್ತೇವೆ ಅದನ್ನು ನೀವು ಅನುಸರಿಸಬೇಕು. ಶೂ ಧರಿಸಬಾರದು. ವಾಹನ ಸಲ್ಲದು, ಪ್ರೇಮಿಸಬಾರದು, ಮೊಬೈಲ್ ಫೋನ್ ಬಳಸಬಾರದು, ಧೂಮಪಾನ ಮಾಡಬಾರದು ಎಂಬೀ ನಿರ್ದೇಶಗಳನ್ನು ಆ ಸ್ಟಿಕ್ಕರ್ನಲ್ಲಿ ನೀಡಲಾಗಿದೆ. ಪೊಲೀಸರು ಬಳಿಕ ಮಿಠಾಯಿಗಳನ್ನು ತಂದ ಕಾರಿನ ಸಹಿತ ವಶಕ್ಕೆ ತೆಗೆದು ಪೊಲೀಸ್ ಠಾಣೆಗೊಯ್ದರು. ಚಾಕ್ಲೆಟ್ಗಳನ್ನು ಪ್ರಸ್ತುತ ಶಾಲೆಯ ಪ್ಲಸ್ ವನ್ ವಿದ್ಯಾರ್ಥಿಗಳಿಗೆ ವಿತರಿಸಲು ಕೆಲವು ಸೀನಿಯರ್ ವಿದ್ಯಾರ್ಥಿಗಳು ತಂದಿದ್ದರೆಂದು, ಜ್ಯೂನಿಯರ್ ವಿದ್ಯಾರ್ಥಿಗಳನ್ನು ತಮ್ಮ ಹಿಡಿತದಲ್ಲಿ ನಿಲ್ಲಿಸುವ ಉದ್ದೇಶದಿಂದ ಆ ಚಾಕ್ಲೆಟ್ಗಳನ್ನು ತಂದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.
ಆ ಕಾರಿನ ಮಾಲಕರನ್ನು ನಂತರ ಪೊಲೀಸರು ಠಾಣೆಗೆ ಕರೆಸಿ ಅವರನ್ನು ವಿಚಾರಿಸಿದಾಗ ಆ ಕಾರನ್ನು ಚಲಾಯಿಸಿದ ಯುವಕನ ಗುರುತು ಹಚ್ಚಿದ್ದಾರೆ. ಕಾರುಚಲಾ ಯಿಸಿದ ಯುವಕ 18 ವರ್ಷ ಪೂರ್ತಿಗೊಂಡವ ಹಾಗೂ ಲೈಸನ್ಸ್ ಹೊಂದಿರುವ ವ್ಯಕ್ತಿಯಾ ಗಿರುವುದರಿಂದ ಆತನ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳದೆ ಆತನಿಗೆ ತಾಕೀತು ನೀಡಿ ಬಳಿಕ ಬಿಡುಗಡೆಗೊಳಿ ಸಿದರು.