ಚೇವಾರು: ಸುಂದರಿ ಕಾಮತ್ ನಿಧನ

ಪೈವಳಿಕೆ: ಪೈವಳಿಕೆ ಪಂಚಾಯತ್ ಮಾಜಿ ಉಪಾಧ್ಯಕ್ಷ ದಿ| ಚೇವಾರು ಜನಾರ್ದನ ಕಾಮತ್‌ರ ಪತ್ನಿ, ಕೊಡುಗೈ ದಾನಿ ಸುಂದರಿ ಕಾಮತ್ (90) ಇಂದು ಮುಂಜಾನೆ ನಿಧನ ಹೊಂದಿದರು. ಮೃತರು ಮಕ್ಕಳಾದ ದಯಾನಂದ ಕಾಮತ್ (ಉದ್ಯಮಿ ಬೆಂಗಳೂರು), ವಿಮಲ ಕಾಮತ್, ಸರಳ ಕಾಮತ್, ಚಂದ್ರಪ್ರಭ ಕಾಮತ್, ಮಲ್ಲಿಕ ಕಾಮತ್, ಅಳಿಯಂದಿರಾದ ರಾಮಕೃಷ್ಣ ನಾಯಕ್ (ವಿಟ್ಲ ಎಸ್‌ಸಿಡಿಸಿಸಿ ಬ್ಯಾಂಕ್ ನಿವೃತ್ತ ಮೆನೇಜರ್), ಪುರುಷೋತ್ತಮ ನಾಯಕ್ (ನಿವೃತ್ತ ಕ್ಯಾಂಪ್ಕೋ ಅಧಿಕಾರಿ), ಗುರುಪಾದ್ (ನಿವೃತ್ತ ಕಾಸರಗೋಡು ತಹಶೀಲ್ದಾರ್), ಹರಿಯಣ್ಣ ನಾಯಕ್ (ನಿವೃತ್ತ ಶಿಕ್ಷಕ) ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ವಿವಿಧ ರಾಜಕೀಯ, ಧಾರ್ಮಿಕ ನಾಯಕರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.

You cannot copy contents of this page