ಪುಳಿಕುತ್ತಿ ದೈವಸ್ಥಾನ ನೇಮ: ಸಾಧಕರಿಗೆ ಸನ್ಮಾನ

ಮಂಗಲ್ಪಾಡಿ: ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವದಂಗವಾಗಿ ಸಭೆ, ಸಾಧಕರಿಗೆ ಸನ್ಮಾನ ಜರಗಿತು. ವಾರ್ಡ್ ಪ್ರತಿನಿಧಿ ವಸಂತ ಕುಮಾರ್ ಮಯ್ಯ ಅಧ್ಯಕ್ಷತೆ ವಹಿಸಿದರು. ಧಾರ್ಮಿಕ ಮುಂದಾಳು ಕೃಷ್ಣ ಶಿವಕೃಪ ಕುಂಜತ್ತೂರು ಭಾಷಣ ಮಾಡಿದರು. ಗುರಿಕಾರ ರಾಮಕೃಷ್ಣ ಪುಳಿಕುತ್ತಿ, ಕರ್ನಾಟಕ ಮಾಜಿ ಸಚಿವ ಅಂಗಾರ, ವಿಶ್ವಹಿಂದೂ ಪರಿಷತ್ ಮುಖಂಡ ಜಯದೇವ ಖಂಡಿಗೆ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಉದ್ಯಮಿ ಮೋಹನ್ ಶೆಟ್ಟಿ ತೂಮಿನಾಡು, ಪಂಚಾಯತ್ ಮಾಜಿ ಸದಸ್ಯೆ ಸುಧಾ ಗಣೇಶ್, ಗೋಪಾಲ ಪುಳಿಕುತ್ತಿ ಉಪಸ್ಥಿತರಿದ್ದರು. ಈ ವೇಳೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಡಾ. ಅತುಲ್ಯ, ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಗೈದ ಅಶ್ವಿನಿ ಇವರನ್ನು ಸನ್ಮಾನಿಸಲಾಯಿತು. ದೇವದಾಸ್ ಶೆಟ್ಟಿ ಪ್ರತಾಪನಗರ ಸ್ವಾಗತಿಸಿ, ದಿವಾಕರ ಪ್ರತಾಪನಗರ ನಿರೂಪಿಸಿ, ವಂದಿಸಿದರು.

You cannot copy contents of this page