ಸಾಮರಸ್ಯಕ್ಕೆ ಮಾದರಿಯಾದ ತೂಮಿನಾಡು: ಮುಸ್ಲಿಂ ಯುವಕರಿಂದ ಮಜ್ಜಿಗೆ ವಿತರಣೆ

ಮಂಜೇಶ್ವರ: ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟಾಗುವ ರೀತಿಯಲ್ಲಿ ವಿವಿಧ ಕಡೆಗಳಲ್ಲಿ ಕಂಡು ಬರುತ್ತಿರುವ ಸನ್ನಿವೇಶದಲ್ಲಿ ತೂಮಿನಾಡಿನ ಮುಸ್ಲಿಂ ಯುವಕರು ಮಾನವೀಯತೆ, ಸೌಹಾರ್ದತೆ ಮೆರೆದಿದ್ದಾರೆ. ತೂಮಿನಾಡು ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತರಿಗೆ ಮಜ್ಜಿಗೆ ವಿತರಿಸುವ ಮೂಲಕ ಯುವಕರು ಕೋಮು ಸೌಹಾರ್ದತೆ ಮೆರೆದಿದ್ದಾರೆ. ನಿನ್ನೆ ಆರಂಭಗೊಂಡ ಬ್ರಹ್ಮಕಲಶ ಹಾಗೂ ವಾರ್ಷಿಕ ನೇಮೋತ್ಸವದ ಹಿನ್ನೆಲೆಯಲ್ಲಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಮುಸ್ಲಿಂ ಯುವಕರ ಈ ಮಾನವೀಯತೆಯ ಸಂದೇಶವನ್ನು ಸಾರ್ವಜನಿಕರು ಶ್ಲಾಘಿಸಿದ್ದಾರೆ. ದೈವಸ್ಥಾನ ಸಮಿತಿ ಕೂಡಾ ಯುವಕರ ಸೇವೆಯನ್ನು ಶ್ಲಾಘಿಸಿದ್ದು, ಇವರ ನಡೆ ಸೌಹಾರ್ದತೆಗೆ ಮಾದರಿ ಎಂದು ಅಭಿಪ್ರಾಯಪಡಲಾಗಿದೆ.

You cannot copy contents of this page