ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಬಾಲಕಿಗೆ ಲೈಂಗಿಕ ಕಿರುಕುಳ: ಯುವಕ ಸೆರೆ

ಕಾಸರಗೋಡು: ಇನ್‌ಸ್ಟಾಗ್ರಾಮ್ ಮೂಲಕ ಪರಿಚಯಗೊಂಡ ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಾಸರಗೋಡು ಪುಲ್ಲೂರು ವೇಲೇಶ್ವರಂ ಭಾಗಂ ಅಲಂಕೋಟ್ ವೀಟಿಲ್ ಶ್ರೀಹರಿ (23)  ಬಂಧಿತನಾದ ಆರೋಪಿ. ಚೋಟಾಣಿಕ್ಕರೆ ಪೊಲೀಸರು ಈತನನ್ನು ಬಂಧಿಸಿದ್ದಾರೆ.

ಇನ್‌ಸ್ಟಾಗ್ರಾಂನ ಮೂಲಕ ಪರಿಚಯಗೊಂಡ ಚೋಟ್ಟಾನಿಕರ ಪೊಲೀಸ್ ಠಾಣೆಯ ವ್ಯಾಪ್ತಿಗೊಳಪಟ್ಟ ಬಾಲಕಿಯನ್ನು ಚೋಟ್ಟಾಣಿಕರ ದೇವಸ್ಥಾನಕ್ಕೆ ಬರಹೇಳಿ ಅಲ್ಲಿ ಆಕೆಯನ್ನು ನೇರವಾಗಿ ಕಂಡ ಶ್ರೀಹರಿ ಆಕೆಗೆ ವಿವಾಹವಾಗ್ದಾನ ನೀಡಿ ಆಕೆಯ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅಲ್ಲಿಗೆ ಹೋಗಿ ಆಕೆಗೆ ಲೈಂಗಿಕ ಕಿರುಕುಳ ನೀಡಿದನೆಂದೂ ಆರೋಪಿಸಲಾಗಿದೆ. ನಂತರ ಆಕೆಯನ್ನು ಕಾಸರಗೋಡಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕಲ್ಲಿಕೋಟೆ ಬೀಚ್‌ಗೆ ಕರೆತಂದು ಅಲ್ಲಿ ಆಕೆ ಜತೆ ಸುತ್ತಾಡುತ್ತಿದ್ದ ವೇಳೆ, ಅಲ್ಲಿಂದ ಪೊಲೀಸರು ಅವರಿಬ್ಬರನ್ನೂ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಮಧ್ಯೆ ತಮ್ಮ ಮಗಳು ನಾಪತ್ತೆಯಾಗಿರುವುದಾಗಿ ಆಕೆಯ ತಾಯಿ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ನಡೆಸಿದ ತನಿಖೆಯಲ್ಲಿ ಈ ಜೋಡಿ ಕಲ್ಲಿಕೋಟೆ ಬೀಚ್‌ನಲ್ಲಿರುವುದನ್ನು ಪತ್ತೆಹಚ್ಚಿ, ಅಲ್ಲಿಂದ ಅವರನ್ನು ವಶಪಡಿಸಿಕೊಂಡಿದ್ದಾರೆ. ಮಾತ್ರವಲ್ಲದೆ, ಆ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ದೂರಿನಂತೆ ಪೊಲೀಸರು ನಂತರ ಶ್ರೀಹರಿ ವಿರುದ್ಧ ಪೋಕ್ಸೋ ಕಾನೂನು ಪ್ರಕಾರ ಪ್ರಕರಣ ದಾಖಲಿಸಿಕೊಂಡು ಆತನ ದಸ್ತಗಿರಿ ದಾಖಲಿಸಿಕೊಂಡರು.

RELATED NEWS

You cannot copy contents of this page