ಉಪ್ಪಳದಲ್ಲಿ ಪೆಟ್ರೋಲ್ ಪಂಪ್ ನೌಕರನಿಗೆ ಹಲ್ಲೆ

ಉಪ್ಪಳ: ವಾಹನಕ್ಕೆ ಪೆಟ್ರೋಲ್ ತುಂಬಿಸುವ ವೇಳೆ ಉಂಟಾದ ವಾಗ್ವಾದ ಮಧ್ಯೆ ಪಿಕಪ್ ಚಾಲಕ ಪೆಟ್ರೋಲ್ ಪಂಪ್‌ನ ನೌಕರನಿಗೆ ಹಲ್ಲೆಗೈದುದಾಗಿ ದೂರಲಾಗಿದೆ. ಉಪ್ಪಳದ ಮೆಹಬೂಬ್ ಪೆಟ್ರೋಲ್ ಪಂಪ್ ನೌಕರನಾದ ಪೆರಿಯಡ್ಕದ ಸಜೇಶ್ (೩೫)ರ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ನಿನ್ನೆ ಬೆಳಿಗ್ಗೆ ೬.೩೦ರ ವೇಳೆ ಘಟನೆ ನಡೆದಿದೆ.

ಬೇರೊಂದು ವಾಹನಕ್ಕೆ ಪೆಟ್ರೋಲ್ ತುಂಬಿಸುತ್ತಿದ್ದಂತೆ ಅಲ್ಲಿಗೆ ಪಿಕಪ್ ಬಂದಿರುವುದಾಗಿ ಹೇಳಲಾಗುತ್ತಿದೆ. ಮೊದಲು ತನ್ನ ವಾಹನಕ್ಕೆ ಡೀಸೆಲ್ ತುಂಬಿಸಬೇಕೆಂದು ಅದರ ಚಾಲಕ ತಿಳಿಸಿದ್ದು, ಇದರಿಂದ ಉಂಟಾದ ವಾಗ್ವಾದ ವೇಳೆ ಹಲ್ಲೆಗೈದುದಾಗಿ ದೂರಲಾಗಿದೆ. ಪೆಟ್ರೋಲ್ ಪಂಪ್‌ನ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳನ್ನು ಪರಿಶೀಲಿಸಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

You cannot copy contents of this page