ಉಪ್ಪಳ ಅಯ್ಯಪ್ಪ ಮಂದಿರದಲ್ಲಿ ಪ್ರತಿಷ್ಠಾ ದಿನಾಚರಣೆ 6ರಂದು

ಉಪ್ಪಳ: ಉಪ್ಪಳ ಶ್ರೀ ಅಯ್ಯಪ್ಪ ಮಂದಿರದಲ್ಲಿ ಬಿಂಬ ಪ್ರತಿಷ್ಠಾ ದಿನಾಚರಣೆ ಎಪ್ರಿಲ್ 6ರಂದು ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ. ಪೂರ್ವಾಹ್ನ 8ರಿಂದ ಗಣಪತಿ ಹೋಮ, ಸಾನಿಧ್ಯ ಕಲಶ ಪೂಜೆ, ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಕಲಶಾಭಿಷೇಕ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ನಾಗ ಸನ್ನಿಧಿಯಲ್ಲಿ ಪಂಚಾಮೃತ ಅಭಿಷೇಕ, ತಂಬಿಲ ಸೇವೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.

You cannot copy contents of this page