ಪಶುರೋಗತಜ್ಞ ಪದ್ಮನಾಭ ಪೈ ನಿಧನ

ಪೆರ್ಲ:  ಅಮೆಕ್ಕಳ ನಿವಾಸಿ  ಪತ್ತು ಪೈ ಎಂದೇ ಕರೆಯಲ್ಪಡುತ್ತಿದ್ದ ಬಳ್ಳಂಬೆಟ್ಟು ಪದ್ಮನಾಭ ಪೈ (79) ನಿನ್ನೆ ಸ್ವ-ಗೃಹದಲ್ಲಿ ನಿಧನಹೊಂದಿ ದರು. ಅಲ್ಪ ಕಾಲದಿಂದ ಅನಾರೋ ಗ್ಯದಿಂದ ಬಳಲುತ್ತಿದ್ದರು. ಪಶುರೋಗ ತಜ್ಞರಾಗಿದ್ದ ಇವರು ಜಾನುವಾರುಗಳ ವಿವಿಧ ಕಾಯಿಲೆಗಳಿಗೆ ಔಷಧ ನೀಡು ತ್ತಿದ್ದರು. ಪೆರ್ಲ ಬಳಿಯ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರಿ(ಉಳ್ಳಾಲ್ತಿ) ವಿಷ್ಣುಮೂರ್ತಿ ದೇವಸ್ಥಾನ ಆಡಳಿತ ಸಮಿತಿಯ ಸದಸ್ಯರಾಗಿದ್ದರು.

ಮೃತರು ಪತ್ನಿ ವಿನಯಾ ಪೈ, ಮಕ್ಕಳಾದ ಶ್ರೀಲತಾ, ಅಮಿತ, ಶ್ರೀನಿವಾಸ ಪೈ (ಇಂಜಿನಿಯರ್), ಗಿರೀಶ್ ಪೈ (ಪೆರ್ಲದಲ್ಲಿ ವ್ಯಾಪಾರಿ), ಅಳಿಯಂದಿರಾದ ನಾಗೇಂದ್ರನಾಥ ಕಿಣಿ ಬಂಟ್ವಾಳ, ಮುರಳೀಧರ ಕಾಮತ್ ಕಾಸರಗೋಡು, ಸೊಸೆಯಂದಿರಾದ  ಸ್ನೇಹ, ವಿಭಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page