ಟಿಪ್ಪರ್, ಹೊಯ್ಗೆ ಸೋಸುವ ಯಂತ್ರ ವಶ; ಪರಾರಿಯಾದ ಲಾರಿ ಚಾಲಕ ಸಹಿತ 7 ಮಂದಿ ವಿರುದ್ಧ ಕೇಸು

ಕುಂಬಳೆ: ಇಚ್ಲಂಗೋಡು ಹೊಳೆಯಿಂದ  ಅನಧಿಕೃತವಾಗಿ ಹೊಯ್ಗೆ ಸಾಗಿಸುತ್ತಿದ್ದ  ವೇಳೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು,  ಈ ವೇಳೆ ಲಾರಿಯನ್ನು ಉಪೇಕ್ಷಿಸಿ  ಚಾಲಕ ಸಹಿತ ಹಲವರು ಪರಾರಿಯಾಗಿದ್ದಾರೆ.  ಈ ಹಿನ್ನೆಲೆಯಲ್ಲಿ ಪೊಲೀಸರು  ಲಾರಿ ಚಾಲಕ,  ಹೊಯ್ಗೆ ಸಂಗ್ರಹಿಸಿಟ್ಟಿದ್ದ ಸ್ಥಳದ ಮಾಲಕ ಹಾಗೂ ಹೊಯ್ಗೆ ಸಂಗ್ರಹಗಾರರ ಸಹಿತ 7 ಮಂದಿ ವಿರುದ್ಧ    ಕೇಸು ದಾಖಲಿಸಿಕೊಂಡಿ ದ್ದಾರೆ. ಲಾರಿ ಹಾಗೂ ಹೊಯ್ಗೆ ಸೋಸುವ ಯಂತ್ರವನ್ನು ವಶಕ್ಕೆ ತೆಗೆಯಲಾಗಿದೆ. ಆರೋಪಿಗಳ ವಿರುದ್ಧ  ಕಳವು ಪ್ರಕರಣ ದಾಖಲಿಸಿಕೊಂಡಿರು ವುದಾಗಿ ಎಸ್‌ಐ ಅನಂತಕೃಷ್ಣನ್ ಆರ್. ಮೆನೋನ್ ತಿಳಿಸಿದ್ದಾರೆ. ಇಚ್ಲಂಗೋಡು ಹೊಳೆಯಿಂದ ಹೊಯ್ಗೆ ಸಾಗಾಟ ವ್ಯಾಪಕಗೊಂಡಿ ರುವುದಾಗಿ ಲಭಿಸಿದ ಮಾಹಿತಿಯಂತೆ ಪೊಲೀಸರು ಅಲ್ಲಿಗೆ ತಲುಪಿದ್ದರು. ಪೊಲೀಸರನ್ನು ಕಂಡು ಲಾರಿ ಚಾಲಕ ಸಹಿತ ಇತರರು ಓಡಿ ಪರಾರಿಯಾಗಿದ್ದಾರೆ. 

RELATED NEWS

You cannot copy contents of this page