ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಕಿಡ್ನಿ ಟ್ಯೂಮರ್ ಯಶಸ್ವಿ ಶಸ್ತ್ರಚಿಕಿತ್ಸೆ

ಕಾಸರಗೋಡು:  ಕಾಸರಗೋಡು ಡಯಲೈಫ್ ಹಾಸ್ಪಿಟಲ್‌ನಲ್ಲಿ ಅಪೂರ್ವವಾದ ಕಿಡ್ನಿ ಟ್ಯೂಮರ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ  ತೆರವುಗೊಳಿಸಲಾಯಿತು.  ರೆನಲ್ ಅಂಗ್ಯೋಮ್ಯೋ ಲಿಪೋಮಾ ಎಂಬ ಗಂಭೀರ ಟ್ಯೂಮರ್ ಬಾಧಿಸಿದ್ದ ೫೦ರ ಹರೆಯದ ಮಹಿಳೆಯ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕಿಡ್ನಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ   ಈ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿರುವುದಾಗಿ ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ. ರೋಗಿಗೆ ಪ್ರತ್ಯೇಕವಾಗಿ ಯಾವುದೇ ಲಕ್ಷಣವಿರಲಿಲ್ಲ. ಸಾಮಾನ್ಯ ಆರೋಗ್ಯ ತಪಾಸಣೆಯಂಗವಾಗಿ ನಡೆಸಿದ  ರುಟೀನ್ ಟೆಸ್ಟ್ ಮೂಲಕ ಟ್ಯೂಮರ್ ಪತ್ತೆಹಚ್ಚಲಾಗಿದೆ. ಅನಂತರ ನಡೆಸಿದ ಸ್ಕ್ಯಾನಿಂಗ್ ಮತ್ತಿತರ ತಪಾಸಣೆಗಳ ಆಧಾರದಲ್ಲಿ  ಕಿಡ್ನಿಯನ್ನು   ತೆರವುಗೊಳಿಸದೆ ಟ್ಯೂಮರ್ ಮಾತ್ರ ತೆರವುಗೊಳಿಸುವ ಶಸ್ತ್ರಚಿಕಿತ್ಸೆ ನಡೆಸಲು ವೈದ್ಯರು ತೀರ್ಮಾನಿಸಿದ್ದಾರೆ. ಡಯಲೈಫ್ ಹಾಸ್ಪಿಟಲ್‌ನ ಯುರೋಲಜಿ ತಜ್ಞರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆ ಬಳಿಕ ರೋಗಿಯ ಆರೋಗ್ಯ ಉತ್ತಮವಾಗಿದೆಯೆಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

RELATED NEWS

You cannot copy contents of this page