ಉಪ್ಪಳ ನಿವಾಸಿ ಖತ್ತರ್‌ನಲ್ಲಿ ನಿಧನ
ಉಪ್ಪಳ: ಕನ್ನಾಟಿಪಾರೆ ನಿವಾಸಿ ಮುಹಮ್ಮದ್ ಫಸಲ್‌ನೂರ್ (48) ಖತ್ತರ್‌ನಲ್ಲಿ ಹೃದಯಾಘಾ ತದಿಂದ ನಿಧನಹೊಂದಿದರು. ಖತ್ತರ್‌ನ ಅಲ್ಖೋರ್‌ನಲ್ಲಿ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದರು. ಬಿ.ಕೆ. ಮುಹಮ್ಮದ್ ಹಾಜಿ-ಆಯಿಶಾಬಿ ದಂಪತಿಯ ಪುತ್ರನಾದ ಮೃತರು ಪತ್ನಿ ಆಬಿದ, ಮಕ್ಕಳಾದ ಮುಹಮ್ಮದ್ ಹಿಲಾಲ್, ಮುಹಮ್ಮದ್ ಅಶ್ಫಾಕ್, ಆಯಿಶತ್ ಆದಿಲ, ಸಹೋದರ-ಸಹೋದರಿಯರಾದ ಖಮರುದ್ದೀನ್, ಮುನೀರ್, ಇರ್ಶಾದ್, ಮೈಮೂನ, ನೂರ್‌ಜಹಾನ್, ಮಿಸ್ರಿಯ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಮೃತದೇಹವನ್ನು ಊರಿಗೆ ತರಲು ಕ್ರಮ ಕೈಗೊಂಡಿರುವುದಾಗಿ ಸಂಬಂಧಪಟ್ಟವರು ತಿಳಿಸಿದ್ದಾರೆ.