ಉಪ್ಪಳ ಬಸ್ ನಿಲ್ದಾಣ ಸುತ್ತ ಕತ್ತಲು : ಬೀದಿ ದೀಪ ಆಳವಡಿಸಲು ಆಗ್ರಹ

ಉಪ್ಪಳ: ಮಂಗಲ್ಪಾಡಿ ಪಂಚಾ ಯತ್‌ನ ಉಪ್ಪಳ ಬಸ್ ನಿಲ್ದಾಣದಲ್ಲಿ ರಾತ್ರಿ ಬೆಳಕಿನ ವ್ಯವಸ್ಥೆಯಿಲ್ಲದೆ ಕತ್ತಲಾವರಿಸಿ ಆತಂಕದ ವಾತಾವರಣ ಉಂಟಾಗುತ್ತದೆ. ಬೀದಿ ದೀಪಗಳನ್ನು ಸ್ಥಾಪಿಸಿ ಬೆಳಕಿನ ವ್ಯವಸ್ಥೆ  ಕಲ್ಪಿಸಲು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆ ಬಸ್ ನಿಲ್ದಾಣದ ಹೆದ್ದಾರಿ ಬದಿಯಲ್ಲಿದ್ದ ಬೀದಿ ದೀಪಗಳನ್ನು ಹೆದ್ದಾರಿ ಅಭಿವೃದ್ಧಿ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದ್ದು, ಮರು ಸ್ಥಾಪನೆಗೆ ಕ್ರಮ ಕೈಗೊಂಡಿಲ್ಲ. ಇದು ಸಾರ್ವಜನಿಕ ರನ್ನು ಸಂಕಷ್ಟಕ್ಕೊಳಗಾ ಗುವಂತೆ ಮಾಡಿರುವುದಾಗಿ ದೂರಲಾಗಿದೆ. ಬಸ್ ನಿಲ್ದಾಣದಲ್ಲಿ ಹಲವಾರು ವ್ಯಾಪಾರ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಪೊಲೀಸ್ ಕಂಟ್ರೋಲ್ ಕೊಠಡಿ ಇದ್ದು ರಾತ್ರಿ ಹೊತ್ತಿನಲ್ಲಿ ಜನರ ಸಂಚಾರಕ್ಕೆ  ಸಮಸ್ಯೆಯಾಗುತ್ತಿದೆ. ವ್ಯಾಪಾರ ಸಂಸ್ಥೆಗಳು ತೆರೆದಿರುವ ತನಕ ಅಲ್ಪಬೆಳಕಿದೆ. ಆದರೆ ಅದು ಕೂಡಾ ಮುಚ್ಚಿದ ಬಳಿಕ ಕತ್ತಲೆಯಾಗುತ್ತಿದ್ದು ಕಳವು ಕೃತ್ಯಕ್ಕೆ ವರದಾನವಾಗಿ ಮಾರ್ಪಾಡುಗೊಳ್ಳುವ ಭೀತಿ ಉಂಟಾಗಿದೆ.  ಬಸ್ ನಿಲ್ದಾಣದ ಒಳಗಡೆ ದೀಪ ಅಳವಡಿಸಿ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page