ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಆರಂಭ
ಎಡನೀರು: ಎಡನೀರು ಮಠದಲ್ಲಿ ನಿನ್ನೆ ಗುರುಪೂರ್ಣಿಮೆ ಯಂದು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬೆಳಗ್ಗೆ ವ್ಯಾಸಪೂಜೆಯನ್ನು ನೆರವೇರಿಸಿ ಪಂಚಮ ಚಾತುರ್ಮಾಸ್ಯ ವ್ರತಾಚರಣೆ ಆರಂಭಿಸಿದರು. 108 ಕಾಯಿ ಮಹಾಗಣಪತಿ ಹೋಮ ನಡೆಯಿತು. ಈ ಸಂದರ್ಭದಲ್ಲಿ 60 ದಿನಗಳ ಭಜನಾ ಕಾರ್ಯಕ್ರಮ ಆರಂ ಭವಾಯಿತು. ಶ್ರೀ ಗೋಪಾಲಕೃಷ್ಣ ಮಹಿಳಾ ಭಜನಾ ಮಂಡಳಿ ಎಡನೀರು ಇವರು ಭಜನೆಗೆ ಚಾಲನೆ ನೀಡಿದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಮತ್ತು ಬಳಗದವರಿಂದ ಭಕ್ತಿ ಸಂಗೀತ, ಮಧ್ಯಾಹ್ನ ಮಹಾಪೂಜೆ ನಡೆಯಿತು.
ಇಂದು ಸಂಜೆ 6ರಿಂದ ಕುರಿಯ ವಿಠಲ ಶಾಸ್ತಿç ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ಸಾದರಪಡಿಸುವ ಯಕ್ಷಗಾನ ತಾಳಮದ್ದಳೆ ಕೃಷ್ಣಸಾರಥ್ಯ ಸ್ವೀಕಾರ ನಡೆಯಲಿದೆ. ಹಿಮ್ಮೇಳದಲ್ಲಿ ಕಾವ್ಯಶ್ರೀ ಅಜೇರು, ಅಡೂರು ಲಕ್ಷಿö್ಮÃ ನಾರಾಯಣ ರಾವ್, ಲವಕುಮಾರ ಐಲ, ಮುಮ್ಮೇಳದಲ್ಲಿ ಹಿರಣ್ಯ ವೆಂಕಟೇಶ್ವರ ಭಟ್, ಉಜಿರೆ ಅಶೋಕ ಭಟ್, ಶೇಣಿ ವೇಣುಗೋಪಾಲ ಭಟ್, ಕೇಕಣಾಜೆ ಕೇಶವ ಭಟ್ ಪಾಲ್ಗೊಳ್ಳಲಿ ದ್ದಾರೆ. ನಾಳೆÀ ಸಂಜೆ 6ರಿಂದ ಸಮನ್ವಯ ಕಲಾಕೇಂದ್ರ ಬೆಂಗಳೂರು ವಿದ್ವಾನ್ ತಿರುಮಲ ಶ್ರೀನಿವಾಸ್ ಇವರ ನಿರ್ದೇಶನದಲ್ಲಿ ಸಂಗೀತ ವೈವಿಧ್ಯ. 13ರಂದು ಅಪರಾಹ್ಣ 2 ಗಂಟೆಯಿAದ ಹಿರಿಯ ಕಲಾವಿದ ಕುಂಬಳೆ ಶ್ರೀಧರ ರಾವ್ ಅವರ ಸ್ಮರಣಾಂಜಲಿ ಅಂಗವಾಗಿ ಸಭಾ ಕಾರ್ಯಕ್ರಮ ಮತ್ತು ಧರ್ಮಸ್ಥಳ ಮೇಳದ ಅವರ ಒಡನಾಡಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.