ಎನ್‌ಟಿಯುನಿಂದ ಮಾದಕ ಪದಾರ್ಥ ವಿರುದ್ಧ ಕಾರ್ಯಕ್ರಮ

ಕಾಸರಗೋಡು: ಸಮಾಜದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಾದಕ ಪದಾರ್ಥಗಳ ಉಪಯೋಗದ ವಿರುದ್ಧ ರಾಷ್ಟ್ರೀಯ ಅಧ್ಯಾಪಕ ಪರಿಷತ್ ನೇತೃತ್ವದಲ್ಲಿ ಮಾದಕ ಪದಾರ್ಥ ವಿರುದ್ಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು.

ಕಾಸರಗೋಡು ಹೊಸ ಬಸ್ ನಿಲ್ದಾಣ ಪರಿಸರದಲ್ಲಿ ನಡೆದ ಕಾರ್ಯಕ್ರಮವನ್ನು ಕಾಸರಗೋಡು ಡಿವೈಎಸ್‌ಪಿ ಸಿ.ಕೆ. ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಮಾದಕ ಮಾಫಿಯಾ ವಿರುದ್ಧ ಸಮಾಜ ಪ್ರತಿಕ್ರಿಯಿಸಲು ಇನ್ನೂ ವಿಳಂಬವಾದರೆ ಮತ್ತೆಂದೂ ಹಿಂತಿರುಗಲಾಗದ ರೀತಿಯಲ್ಲಿ ನಮ್ಮ ನಾಡು ನಾಶವಾಗಲಿದೆ ಎಂದು ಅವರು ಸೂಚಿಸಿದರು.

ಜಿಲ್ಲಾಧ್ಯಕ್ಷ ಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಕೆ. ಪ್ರಭಾಕರನ್ ನಾಯರ್, ಒ. ಸತೀಶ್ ಕುಮಾರ್ ಶೆಟ್ಟಿ, ಅರವಿಂದಾಕ್ಷ ಭಂಡಾರಿ, ಎ. ಸುಚಿತ ಮಾತನಾಡಿದರು. ಎಂ. ರಂಜಿತ್ ಸ್ವಾಗತಿಸಿ, ಕೆ. ಅಜಿತ್ ವಂದಿಸಿದರು.

You cannot copy contents of this page