ಎಸ್‌ಎಟಿ ಶಾಲೆಯ ಸ್ಕೌಟ್ ಗೈಡ್ ವಿದ್ಯಾರ್ಥಿಗಳಿಂದ ನಾಟಿ

ಮಂಜೇಶ್ವರ: ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶದಿಂದ ಎಸ್‌ಎ ಟಿ ಶಾಲೆಯ ಸ್ಕೌಟ್ ಹಾಗೂ ಗೈಡ್ ದಳದ ವತಿಯಿಂದ ಶ್ರೀಮತ್ ಅನಂತೇಶ್ವರ ದೇವಳದ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಸುಮಾರು 50 ಮಂದಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಸೇರಿಕೊಂಡು ಗದ್ದೆಯಲ್ಲಿ ನೇಜಿ ನೆಟ್ಟು ಸಂಭ್ರಮಿಸಿದರು. ಸದಾಶಿವ ಮೂಲ್ಯ ಕೃಷಿಯ ಕುರಿತು ಮಾಹಿತಿ ಮತ್ತು ನೇಜಿ ನೆಡುವ ಪ್ರಾತ್ಯಕ್ಷಿಕೆ ನಡೆಸಿದರು. ಸ್ಕೌಟ್ ಅಧ್ಯಾಪಕರಾದ ಲಕ್ಷ್ಮಿದಾಸ್ ಪ್ರಭು ಹಾಗೂ ಗೈಡ್ ಅಧ್ಯಾಪಿಕೆ ಸುಕನ್ಯಾ ಕೆ.ಟಿ ನೇತೃತ್ವ ವಹಿಸಿದರು.

You cannot copy contents of this page