ಒಂದು ಕಿಲೋ ಗಾಂಜಾ ಸಹಿತ ಓರ್ವ ಸೆರೆ
ಕಾಸರಗೋಡು: ಪಿಕ್ಅಪ್ ವಾಹನದಲ್ಲಿ ಮಾರಾಟಕ್ಕಾಗಿ ತರಲಾಗುತ್ತಿದ್ದ ಒಂದು ಕಿಲೋ ಗಾಂಜಾವನ್ನು ಕಳ್ಳಾರ್ ಬಳಿಯಿಂದ ರಾಜಪುರಂ ಪೊಲೀಸ್ ಇನ್ಸ್ಪೆಕ್ಟರ್ ಪಿ. ರಾಜೇಶ್ರ ನೇತೃತ್ವದ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದಕ್ಕೆ ಸಂಬಂಧಿಸಿ ಪಾಣತ್ತೂರು ಕಂಬಿಕಾನಂ ವೀಟಿಲ್ ಮೊಹಮ್ಮದ್ ಅಶ್ರಫ್ (20) ಎಂಬಾತನನ್ನು ಬಂಧಿಸಿ ಕೇಸು ದಾಖಲಿಸಲಾಗಿದೆ.
ಮಾಲು ಸಾಗಿಸಲು ಬಳಸಲಾಗಿದ್ದ ವಾಹನವನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಂಧಿತ ಆರೋಪಿ ಪಾಣತ್ತೂರಿನಲ್ಲಿ ಮೀನು ಮಾರಾಟ ಮಾಡುವ ವ್ಯಕ್ತಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.