ಕಡಂಬಾರ್ ಜುಮಾ ಮಸೀದಿಯಲ್ಲಿ ಇಫ್ತಾರ್ ಸಂಗಮ

ಮಂಜೇಶ್ವರ: ಕಡಂಬಾರ್ ಜುಮಾ ಮಸೀದಿಯಲ್ಲಿ ಪವಿತ್ರ ರಂಜÁನ್ ಪ್ರಯುಕ್ತ ವೆಲ್ಫೇರ್ ಕಮಿಟಿ ಅಧ್ಯಕ್ಷ ಹಾಗೂ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮಂಜೇಶ್ವರ ಪಂಚಾಯತ್ 10ನೇ ವಾರ್ಡ್ ಅಧ್ಯಕ್ಷ  ಉಸ್ಮಾನ್ ಕಡಂಬಾರ್‌ರ ನೇತೃತ್ವದಲ್ಲಿ ಇಫ್ತಾರ್ ಸಂಗಮ ಹಾಗೂ ಔತಣ ಕೂಟ ನಡೆಯಿತು. ಊರಿನ ಮುಖಂಡರು, ರಾಜಕೀಯ ಹಾಗೂ ಸಾಮಾಜಿಕ ಧಾರ್ಮಿಕ ಸಂಘಟನೆಗಳ ನೇತಾರರು ಪಾಲ್ಗೊಂಡರು. 
ಈ ಸಂದರ್ಭ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಗೋಲ್ಡನ್ ರಹ್ಮಾನ್, ಉಸ್ಮಾನ್ ಹಾಜಿ ಕಡಂಬಾರ್, ಶಾಫಿ ಬರ್ವ, ಜನ ಪ್ರತಿನಿಧಿಗಳಾದ ಹಮೀದ್ ಹೊಸಂಗಡಿ, ಮೊಹಮ್ಮದ್ ಸಿದ್ದೀಖ್, ನೇತಾರರಾದ ಹರ್ಷಾದ್ ವರ್ಕಾಡಿ, ಮುಸ್ತಫ ಕಡಂಬಾರ್, ಮೊÊದು ಕಡಂಬಾರ್, ಕರೀಂ ಬರಕ, ಕಲೀಲ್ ಕಡಂಬಾರ್, ಕಡಂಬಾರ್ ಜುಮಾ ಮಸೀದಿ ಕಾರ್ಯದರ್ಶಿ, ಕೋಶಾಧಿಕಾರಿ ಸೇರಿದಂತೆ ವಿವಿಧ ರಾಜಕೀಯ ನೇತಾರರು  ಹಾಗೂ ಊರಿನ ಗಣ್ಯರು ಪಾಲ್ಗೊಂಡು ಧಾರ್ಮಿಕ ಸಮಾನತೆ ಮೆರೆದರು.

RELATED NEWS

You cannot copy contents of this page