ಕಣ್ಣೂರು ಎಡಿಎಂ ಆತ್ಮಹತ್ಯೆ: ನ್ಯಾಯಾಂಗ ತನಿಖೆಗೆ ಎನ್‌ಜಿಒ ಅಸೋಸಿಯೇಶನ್ ಆಗ್ರಹ

ಕಾಸರಗೋಡು: ಕಣ್ಣೂರು ಎಡಿಎಂ ನವೀನ್‌ಬಾಬುರ ನಿಧನದಲ್ಲಿ  ನ್ಯಾಯಾಂಗ ತನಿಖೆ ನಡೆಸಬೇಕೆಂದು ಕೇರಳ ಎನ್‌ಜಿಒ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಎ.ಟಿ. ಶಶಿ ಆಗ್ರಹಿಸಿದರು. ನವೀನ್‌ಬಾಬುರನ್ನು ಆತ್ಮಹತ್ಯೆಗೈಯ್ಯಲು ಪ್ರೇರಣೆ ನೀಡಿದವರನ್ನು ಬಂಧಿಸಬೇ ಕೆಂದು ಆಗ್ರಹಿಸಿ ಅಸೋಸಿಯೇಶನ್ ಜಿಲ್ಲಾ ಸಮಿತಿ ಸಿವಿಲ್ ಸ್ಟೇಷನ್‌ನಲ್ಲಿ ನಡೆಸಿದ ಪ್ರತಿಭಟನಾ ಮೆರವಣಿಗೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಎಡರಂಗದ ಆಡಳಿತದಲ್ಲಿ ಸೇವಾ ಸಂಘಟನೆಗಳಿಗೆ ಕೂಡಾ ಸುರಕ್ಷಿತತೆ ಇಲ್ಲ ಎಂಬುದಕ್ಕೆ ಪುರಾವೆಯಾಗಿದೆ ನವೀನ್ ಬಾಬುರ ಮರಣವೆಂದು, ನೌಕರರ ಜೀವ ಹಾನಿಯಾಗುತ್ತಿದ್ದರೂ ಪ್ರತಿಕ್ರಿಯಿಸಲು ಎಡ ಸೇವಾ ಸಂಘಟನೆಗಳಿಗೆ ಸಾಧ್ಯವಾಗು ತ್ತಿಲ್ಲವೆಂದು ಅವರು ನುಡಿದರು. ಸೆಟೋ ಅಧ್ಯಕ್ಷ ಕೆ.ಎ. ಜಯಪ್ರಕಾಶ್ ಅಧ್ಯಕ್ಷತೆ ವಹಿಸಿದರು. ಹಲವರು ಭಾಗವಹಿಸಿದರು.

RELATED NEWS

You cannot copy contents of this page