ಕನ್ನಡ ಪತ್ರಕರ್ತರ ಕುಟುಂಬ ಮಿಲನ, ಪತ್ರಿಕಾ ದಿನಾಚರಣೆ 13ರಂದು
ಕಾಸರಗೋಡು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾ ಭಿವೃದ್ಧಿ ಸಂಘ, ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಜಿಲ್ಲಾ ಘಟಕ ಇದರ ಆಶ್ರಯದಲ್ಲಿ ಕನ್ನಡ ಪತ್ರಿಕಾ ದಿನಾಚರಣೆ ಹಾಗೂ ನಲಿವಿನ ನೌಕೆ ಪತ್ರಕರ್ತರ ಕುಟುಂಬ ಮಿಲನ ಈ ತಿಂಗಳ 13ರಂದು ಬೆಳಿಗ್ಗೆ 9.30ರಿಂದ ನೀಲೇಶ್ವರ ತಾಜ್ ಕ್ರೂಯಿಜ್ ಹೌಸ್‌ಬೋಟ್‌ನಲ್ಲಿ ನಡೆಯಲಿದೆ. ಕರ್ನಾಟಕ ಸರಕಾರದ ಮಾಹಿತಿ ಆಯುಕ್ತ ಬದ್ರುದ್ದೀನ್ ಕೆ ಮಾಣಿ ದೀಪಪ್ರಜ್ವಲನೆಗೈಯ್ಯುವರು. ಕರ್ನಾಟಕ ಮುಖ್ಯಮಂತ್ರಿಯ ಮಾಧ್ಯಮ ಸಲಹೆ ಗಾರ ಕೆ.ವಿ. ಪ್ರಭಾಕರ ಪ್ರಶಸ್ತಿ ಪ್ರದಾನ ಮಾಡುವರು. ಕೆಯುಡಬ್ಲ್ಯು ಜೆ ರಾಜ್ಯ ಘಟಕ ಅಧ್ಯಕ್ಷ ಶಿವಾನಂದ ತಗಡೂರು ಪತ್ರಿಕಾದಿನ ಸಂದೇಶ ನೀಡುವರು. ಹಿರಿಯ ಪತ್ರಕರ್ತ ಗಂಗಾಧರ ಪಿಲಿಯೂರುರವರಿಗೆ ಪತ್ರಿಕಾದಿನ ಪ್ರಶಸ್ತಿ ಹಾಗೂ ಶಿಕ್ಷಣ ತಜ್ಞ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಇವರಿಗೆ ಗೌರವಾರ್ಪಣೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸುವರು.