ಮಂಜೇಶ್ವರ: ಮಂಜೇಶ್ವರ ತಪಾಸಣಾ ಕೇಂದ್ರದಲ್ಲಿ ಅಬಕಾರಿ ಇನ್‌ಸ್ಪೆಕ್ಟರ್ ಆರ್. ರಿನೋಶ್ ನೇತೃತ್ವದ ಅಬಕಾರಿ ತಂಡ ನಿನ್ನೆ ರಾತ್ರಿ ನಡೆಸಿದ ಕಾರ್ಯಾಚರಣೆಯಲ್ಲಿ ಬೃಹತ್ ಪ್ರಮಾಣದ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಮಂಗಳೂರು ಜಪ್ಪಿನಮೊಗರು ಗೋರಿಗುಡ್ಡೆ ಲೋಬೋ ಕಾಂಪೌಂ ಡ್‌ನ ಬಾಲಕೃಷ್ಣ ಎ (೫೦) ಎಂಬಾ ತನನ್ನು ಬಂಧಿಸಿ ಆತನ ವಿರುದ್ಧ ಅಬ ಕಾರಿ ಪ್ರಕರಣ ದಾಖಲಿಸಲಾಗಿದೆ.
ನಿನ್ನೆ ರಾತ್ರಿ ೯ ಗಂಟೆ ವೇಳೆ ಈ ಕಾರ್ಯಾಚರಣೆ ನಡೆದಿದೆ. ಕರ್ನಾಟಕ ರಾಜ್ಯ ನೋಂದಾವಣೆ ಹೊಂದಿದ ಮಾರುತಿ ಸ್ವಿಫ್ಟ್ ಕಾರಿನಲ್ಲಿ ೫೦ ಕಾರ್ಡ್ ಬೋರ್ಡ್ ಪೆಟ್ಟಿಗೆಗಳಲ್ಲಾಗಿ ೨೪೦೦ ಟೆಟ್ರೋ ಪ್ಯಾಕೆಟ್( ೪೩೨ ಲೀಟರ್) ಕರ್ನಾಟಕ ಮದ್ಯ ವಶಪಡಿಸಲಾಗಿದೆ.
ಇದನ್ನು ಮಂಗಳೂರಿನಿಂದ ಕುಂಬಳೆ ಮತ್ತು ಕಾಸರಗೋಡಿಗೆ ಸಾಗಿಸಲಾಗುತ್ತಿತ್ತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಸುರೇಶ್‌ಬಾಬು ಕೆ, ಸಿವಿಲ್ ಎಕ್ಸೈಸ್ ಆಫೀಸರ್‌ಗಳಾದ ಮೊಹಮ್ಮದ್ ಇಜಾಸ್ ಪಿ ಪಿ, ಮಂಜುನಾಥ ಬಿ, ಸಬಿತ್‌ಲಾಲ್ ವಿ ಬಿ ಮತ್ತು ಚಾಲಕ ಸತ್ಯನ್ ಕೆ ಇ ಎಂಬಿವರು ಒಳಗೊಂಡಿದ್ದರು.
 
								 
															





