ಕಾಡುಹಂದಿ ದಾಳಿ: ಬೈಕ್‌ನಲ್ಲಿ ತೆರಳುತ್ತಿದ್ದ ಹೋಟೆಲ್ ಕಾರ್ಮಿಕನಿಗೆ ಗಂಭೀರ ಗಾಯ

ಮುಳ್ಳೇರಿಯ: ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ತಂದೆ ಹಾಗೂ ಮಗನ ಮೇಲೆ ಕಾಡುಹಂದಿ ದಾಳಿ ನಡೆಸಿದ್ದು, ಇದರಿಂದ ಒಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪೂವಡ್ಕದಲ್ಲಿ ಹೋಟೆಲ್ ಕಾರ್ಮಿಕನಾಗಿರುವ ಕಾಸರ

ಗೋಡು ಪೆರುಂಬಳ  ಚೋಲಿ ಯೋಡ್‌ನ  ಅಬ್ದುಲ್ ಖಾದರ್ (47) ಹಂದಿಯ ದಾಳಿಯಿಂದ ಗಾಯಗೊಂಡು  ಗಂಭೀರ ಗಾಯಗೊಂಡಿದ್ದಾರೆ. ಇವರನ್ನು ಚೆಂಗಳದ ನಾಯನಾರ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಇವರು ಮೊನ್ನೆ ರಾತ್ರಿ 9.15ರ ವೇಳೆ ಕೆಲಸ ಮುಗಿಸಿ ಮಗನೊಂದಿಗೆ ಬೈಕ್‌ನಲ್ಲಿ  ಮನೆಗೆ ಮರಳುತ್ತಿದ್ದಾಗ ಕೋಟೂರು ಅಕ್ಕರ ಫೌಂಡೇಶನ್ ಸ್ಟಾಪ್‌ಗೆ ತಲುಪುತ್ತಿದ್ದಂತೆ ರಸ್ತೆಯಲ್ಲಿ   ಕಾಡುಹಂದಿ ದಾಳಿ ನಡೆಸಿದೆ. ಬೈಕ್‌ನಲ್ಲಿದ್ದವರು  ಬೊಬ್ಬೆ ಹಾಕಿದಾಗ ಅದು ಹೆದರಿ ಓಡಿ ಪರಾರಿಯಾಗಿದೆ. ಘಟನೆಯಿಂದ ಅಬ್ದುಲ್ ಖಾದರ್‌ರ ಕಾಲಿಗೆ ಗಂಭೀರ ಗಾಯಗಳಾಗಿವೆ.

RELATED NEWS

You cannot copy contents of this page