ಕಾಸರಗೋಡು ತಾಲೂಕು ಎನ್‌ಎಸ್‌ಎಸ್ ಕರಯೋಗ ಪದಾಧಿಕಾರಿಗಳು
ಕಾಸರಗೋಡು: ಎನ್‌ಎಸ್‌ಎಸ್ ಕಾಸರಗೋಡು ತಾಲೂಕು ಕರಯೋಗ ಯೂನಿಯನ್ ಆಡಳಿತ ಸಮಿತಿಯ ಆಯ್ಕೆ ಇತ್ತೀಚೆಗೆ ಯೂನಿಯನ್ ಮಂದಿರದಲ್ಲಿ ಜರಗಿತು. ಅಧ್ಯಕ್ಷ ನ್ಯಾಯವಾದಿ ಎ. ಬಾಲಕೃಷ್ಣನ್ ನಾಯರ್ ಅಧ್ಯಕ್ಷತೆ ವಹಿಸಿದರು. ಕೆ.ಕೆ. ವಿನೀಶ್ ಕುಮಾರ್ ಚುನಾವಣಾಧಿಕಾರಿಯಾಗಿದ್ದು, ೧೫ ಮಂದಿ ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಯೂನಿಯನ್ ಅಧ್ಯಕ್ಷರಾಗಿ ನ್ಯಾಯವಾದಿ ಎ. ಬಾಲಕೃಷ್ಣನ್ ನಾಯರ್, ಉಪಾಧ್ಯಕ್ಷರಾಗಿ ಸಿ. ಭಾಸ್ಕರನ್ ನಾಯರ್ ಎಂಬಿವರನ್ನು ಆಯ್ಕೆ ಮಾಡಲಾಯಿತು. ಕಾರ್ಯದರ್ಶಿ ಇ. ಅರವಿಂದಾಕ್ಷನ್ ಸ್ವಾಗತಿಸಿ, ಸಿ. ಭಾಸ್ಕರನ್ ವಂದಿಸಿದರು.