ಕಾಸರಗೋಡು ರೋಟರಿಯಿಂದ ಜನರಲ್ ಆಸ್ಪತ್ರೆಗೆ ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ನಾಳೆ ಹಸ್ತಾಂತರ

ಕಾಸರಗೋಡು: ರೋಟರಿ ಕಾಸರ ಗೋಡು ಇದರ ಗ್ಲೋಬಲ್ ಗ್ರಾಂಟ್ ಯೋಜನೆ ಅಂಗವಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಮೊಬೈಲ್ ಬ್ಲಡ್ ಬ್ಯಾಂಕ್ ವ್ಯಾನ್ ನೀಡಲಾಗುವುದು.  ನಾಳೆ ಬೆಳಿಗ್ಗೆ ೧೦ ಗಂಟೆಗೆ ಕಾಸರಗೋಡು ಜನರಲ್ ಆಸ್ಪತ್ರೆಯ ಕಾರುಣ್ಯ ಫಾರ್ಮಸಿ ಬಳಿ ನಡೆಯುವ ಕಾರ್ಯಕ್ರಮವನ್ನು ಶಾಸಕ ಎನ್.ಎ. ನೆಲ್ಲಿಕುನ್ನು ಉದ್ಘಾಟಿಸುವರು. ರೋಟರಿ ಕಾಸರಗೋಡು ಇದರ ಅಧ್ಯಕ್ಷ ಡಾ| ಬಿ. ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸುವರು. ಜನರಲ್ ಆಸ್ಪತ್ರೆಯ ಸುಪರಿಂಟೆಂಡೆಂಟ್ ಇನ್ ಚಾರ್ಜ್ ಡಾ| ಜನಾರ್ದನ ನಾಯ್ಕ ಕೀಲಿ ಕೈ ಹಸ್ತಾಂತರಿ ಸುವರು. ಡಿಸ್ಟ್ರಿಕ್ಟ್ ಗವರ್ನರ್ ಡಾ| ಸಂತೋಷ್ ಶ್ರೀಧರ್ ಮುಖ್ಯ ಅತಿಥಿಯಾಗಿ ರುವರು. ನಗರಸಭಾ ಚೆಯರ್‌ಮೆನ್ ಅಬ್ಬಾಸ್ ಬೀಗಂ ಮುಖ್ಯ ಭಾಷಣ ಮಾಡುವರು. ಶಾಸಕ ಸಿ.ಎಚ್. ಕುಞಂಬು ಸಹಿತ ಹಲವು ಗಣ್ಯರು ಉಪಸ್ಥಿತರಿರುವರು.

RELATED NEWS

You cannot copy contents of this page