ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಮಧ್ಯೆ ಕಾದಾಟ: ಬೆದರಿಸಿ ಓಡಿಸಿದ ಪೊಲೀಸರು

ಕುಂಬಳೆ: ಕುಂಬಳೆ ಪೇಟೆಯಲ್ಲಿ ನಿನ್ನೆ ಸಂಜೆ ವಿದ್ಯಾರ್ಥಿಗಳ ಎರಡು ತಂಡಗಳು ಪರಸ್ಪರ ಹೊಡೆದಾಡಿ ಕೊಂಡಿವೆ. ವಿಷಯ ತಿಳಿದು ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು  ತಲುಪಿ ವಿದ್ಯಾರ್ಥಿಗಳನ್ನು ಚದುರಿಸಿದರು. ಹಲವರನ್ನು  ಕಸ್ಟಡಿಗೆ ತೆಗೆದು ತಾಕೀತು ನೀಡಿ  ಬಿಡುಗಡೆ ಗೊಳಿಸಿದ್ದಾರೆ. ಶಿರಿಯ ಹಾಗೂ ಕುಂಬಳೆ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ಎರಡು ತಂಡಗಳು ನಿನ್ನೆ ಸಂಜೆ ಹೊಡೆದಾಡಿಕೊಂಡಿವೆ.

ಕಳೆದ ನಾಲ್ಕು ದಿನಗಳಿಂದ ವಿದ್ಯಾರ್ಥಿಗಳು ಘರ್ಷಣೆ  ಉದ್ದೇಶ ದೊಂದಿಗೆ ಪೇಟೆಯಲ್ಲಿ  ಗುಂಪು ಸೇರುತ್ತಿದ್ದರೆಂದೂ ನಿನ್ನೆ ಹೊಡೆದಾಡಿ ಕೊಂಡಿರುವುದಾಗಿ ಹೇಳಲಾಗುತ್ತಿದೆ. ಕುಂಬಳೆ ಪೇಟೆಯಲ್ಲಿ ವಿದ್ಯಾರ್ಥಿಗಳ ಘರ್ಷಣೆ ಪದೇ ಪದೇ ನಡೆಯುತ್ತಿದ್ದು, ಇದು ಪೇಟೆಗೆ ತಲುಪುವ ಇತರರಿಗೆ ಭಾರೀ ಆತಂಕ ಸೃಷ್ಟಿಸುತ್ತಿದೆ.

RELATED NEWS

You cannot copy contents of this page