ಕುಂಬಳೆ ಹೋಟೆಲ್ ಮಾಲಕ ನಿಧನ

ಕುಂಬಳೆ: ಅಸೌಖ್ಯ ಬಾಧಿಸಿ ಚಿಕಿತ್ಸೆಯಲ್ಲಿದ್ದ ಹೋಟೆಲ್ ಮಾಲಕ ಮೃತಪಟ್ಟರು. ಕುಂಬಳೆಯ ಅನ್ನಪೂರ್ಣ ಹೋಟೆಲ್ ಮಾಲಕ, ಕುಂಬಳೆ ಬದಿಯಡ್ಕ ರಸ್ತೆಯ ನಿವಾಸಿ ಪ್ರಭಾಕರ (62) ಎಂಬವರು ಮೃತಪಟ್ಟ ವ್ಯಕ್ತಿ. ನಿನ್ನೆ ಸಂಜೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಸಂಭವಿಸಿದೆ. ಇವರು ಆರ್‌ಎಸ್‌ಎಸ್‌ನ ಸಕ್ರಿಯ ಕಾರ್ಯಕರ್ತನಾಗಿದ್ದರು. ಮೃತರು ಪತ್ನಿ ಸುಕನ್ಯ, ಮಕ್ಕಳಾದ ಡಾ| ಲಾವಣ್ಯ (ಶಿವಮೊಗ್ಗ) ಸುಪ್ರಭ (ಕೆನಡಾ), ಅಳಿಯಂದಿರಾದ ಡಾ| ಇಶಾನ್ (ಶಿವಮೊಗ್ಗ), ಅಕ್ರಾಶ್, ಸಹೋದರಿಯರಾದ ನಿರ್ಮಲ, ರಾಜೇಶ್ವರಿ, ಪುಷ್ಪಾವತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಮೃತದೇಹದ ಅಂತ್ಯ ಸಂಸ್ಕಾರ ಇಂದು ಬೆಳಿಗ್ಗೆ ಕುಂಟಂಗೇರಡ್ಕ ಸ್ಮಶಾನದಲ್ಲಿ ನಡೆಸಲಾಯಿತು.

You cannot copy contents of this page