ಕೆಂಪು ಕಲ್ಲು ಮಾಲಕರ ಕ್ಷೇಮ ಸಂಘದ ಮುಷ್ಕರ: ಸಿಪಿಐ ಮುಖಂಡರಿಂದ ಬೆಂಬಲ

ಕಾಸರಗೋಡು: ಕೆಂಪು ಕಲ್ಲು ಉತ್ಪಾದಕ ಮಾಲಕರ ಕ್ಷೇಮ ಸಂಘ ಜಿಲ್ಲಾ ಸಮಿತಿ ಕಲೆಕ್ಟ್ರೇಟ್ ಪರಿಸರದಲ್ಲಿ ನಡೆಸುತ್ತಿರುವ ಅನಿರ್ದಿಷ್ಟ ಕಾಲ ಉಪವಾಸ ಮುಷ್ಕರ ಚಪ್ಪರಕ್ಕೆ ಸಿಪಿಐ ಮುಖಂಡರು ಭೇಟಿ ನೀಡಿದರು. ಮುಷ್ಕರವನ್ನು ಶೀಘ್ರವೇ ಇತ್ಯರ್ಥಗೊಳಿಸಲು ಅವರು ಆಗ್ರಹಿಸಿದರು. ಸಿಪಿಐ ಜಿಲ್ಲಾ ಕಾರ್ಯದರ್ಶಿ ಸಿ.ಪಿ. ಬಾಬು, ರಾಜ್ಯ ಸಮಿತಿ ಸದಸ್ಯ ಟಿ. ಕೃಷ್ಣನ್, ಜಿಲ್ಲಾ ಕೌನ್ಸಿಲ್ ಸದಸ್ಯರಾದ ಕೆ. ಕುಂಞಿರಾಮನ್, ಜಯರಾಮ ಬಲ್ಲಂಗೂಡೇಲ್, ಅಜಿತ್ ಎಂ.ಸಿ. ಲಾಲ್‌ಬಾಗ್, ಬಿಜು ಉಣ್ಣಿತ್ತಾನ್, ವಿಜಯ ಕುಮಾರ್ ಪೆರ್ಮುದೆ ಮೊದಲಾದವರು ತಂಡದಲ್ಲಿದ್ದರು.

RELATED NEWS

You cannot copy contents of this page