ಕೇರಳಕ್ಕೆ ಎಂಡಿಎಂಎ ತಲುಪಿಸುವ ತಂಡದ ಕೊಂಡಿ ಬಿಹಾರ ನಿವಾಸಿ ಮಹಿಳೆ ಸೆರೆ
ತೃಶೂರು: ರಾಜ್ಯಕ್ಕೆ ಎಂಡಿಎಂಎ ತಲುಪಿಸುವ ತಂಡದ ಕೊಂಡಿಯಾದ ಬಿಹಾರ ನಿವಾಸಿಯನ್ನು ತೃಶೂರು ಪೊಲೀಸರು ಸೆರೆ ಹಿಡಿದಿದ್ದಾರೆ. ಸೀಮಾ ಸಿನ್ಹರನ್ನು ಹರ್ಯಾಣದ ಗುರುಗ್ರಾಮ್‌ನ ಆಫ್ರಿಕನ್ ಕಾಲನಿಯಿಂದ ಪೊಲೀಸರು ಇತ್ತೀಚೆಗೆ ಸೆರೆ ಹಿಡಿದಿದ್ದಾರೆ. ಎಂಡಿಎಂಎ ರಖಂ ವ್ಯಾಪಾರಿಯಾದ ಈಕೆ 10 ದಿನದೊಳಗೆ 1 ಕೋಟಿ ರೂ.ಗಳ ಮಾದಕ ಪದಾರ್ಥ ಮಾರಾಟ ನಡೆಸಿರುವುದಾಗಿ ಪೊಲೀಸರು ಪತ್ತೆಹಚ್ಚಿದ್ದಾರೆ. ಕಳೆದ ಫೆಬ್ರವರಿಯಲ್ಲಿ 47 ಗ್ರಾಂ ಎಂಡಿಎಂಎ ಸಹಿತ ತೃಶೂರು ರೈಲ್ವೇ ನಿಲ್ದಾಣದಲ್ಲಿ ಸೆರೆಯಾದ ಫಸಲ್ ನಿಝಿಲ್‌ನ ಹಿನ್ನೆಲೆ ತನಿಖೆ ನಡೆಸುತ್ತಾ ಮುಂದುವರಿದಾಗ ಸೀಮಾಳ ಬಗ್ಗೆ ತಿಳಿದು ಬಂದಿದ್ದು, ಈಗ ಈಕೆಯನ್ನು ಬಂಧಿಸಲಾಗಿದೆ. ನಿಝಿಲ್ ಎಂಡಿಎಂಎ ಖರೀದಿಸಿದ್ದು ಸೀಮಾಳಿಂದ ಎಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಸೀಮಾಳ ನೇತೃತ್ವದಲ್ಲಿ ದೊಡ್ಡದೊಂದು ತಂಡ ಗುರುಗ್ರಾಮ್ ಕೇಂದ್ರದಲ್ಲಿ ಅಂತಾರಾಜ್ಯ ಮಾದಕ ಪದಾರ್ಥ ಮಾರಾಟ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಬಳಿಕ ಎರಡು ತಿಂಗಳಷ್ಟು ಕಾಲ ನಡೆಸಿದ ತನಿಖೆಯ ಕೊನೆಯಲ್ಲಿ ಸೀಮಾಳನ್ನು ಸೆರೆ ಹಿಡಿಯಲಾಗಿದೆ. ಕೇರಳಕ್ಕೆ ಎಂಡಿಎಂಎ ತಲುಪಿಸುವ ಇನ್ನಷ್ಟು ಮಂದಿಯನ್ನು ಸೆರೆ ಹಿಡಿಯಲು ಈಕೆಯ ಬಂಧನ ನೆರವಾಗಲಿದೆ ಎಂದು ಪೊಲೀಸರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ.