ಕೇರಳ ಕೋ ಆಪರೇಟಿವ್ ಎಂಪ್ಲಾಯೀಸ್ ಫ್ರಂಟ್ ರಾಜ್ಯ ಸಮ್ಮೇಳನ ನಾಳೆಯಿಂದ
ಕಾಸರಗೋಡು: ಕೇರಳ ಕೋ ಆಪರೇಟಿವ್ ಎಂಪ್ಲಾಯೀಸ್ ಫ್ರಂಟ್ ರಾಜ್ಯ ಸಮ್ಮೇಳನ ಅ. ೧೪, ೧೫ರಂದು ಕಳನಾಡು ಕೆ.ಎಚ್.ಹಾಲ್‌ನಲ್ಲಿ ನಡೆಯಲಿದೆ. ೧೪ರಂದು ಬೆಳಿಗ್ಗೆ ೯.೩೦ಕ್ಕೆ ಧ್ವಜಾರೋಹಣ, ೧೦ಕ್ಕೆ ಸಮ್ಮೇಳನವನ್ನು ವಿಪಕ್ಷ ನೇತಾರ ವಿ.ಡಿ. ಸತೀಶನ್ ಉದ್ಘಾಟಿಸುವರು. ಸಂಘಟಕ ಸಮಿತಿ ಚೆಯರ್‌ಮೆನ್ ಪಿ.ಕೆ. ಫೈಸಲ್ ಅಧ್ಯಕ್ಷತೆ ವಹಿಸುವರು. ಕೆ.ಸಿ.ಇ.ಎಫ್ ರಾಜ್ಯ ಅಧ್ಯಕ್ಷ ವಿನಯ ಕುಮಾರ್ ಪಿ.ಕೆ, ಪ್ರಾಸ್ತಾವಿಕ ಭಾಷಣ ಮಾಡುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಮುಖ್ಯ ಭಾಷಣ ಮಾಡುವರು. ಶಾಸಕ ಎನ್.ಎ. ನೆಲ್ಲಿಕುನ್ನು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೋನಿ ಸೆಬಾಸ್ಟಿಯನ್, ಡಿ.ಸಿ.ಸಿ. ಕಣ್ಣೂರು ಜಿಲ್ಲಾಧ್ಯಕ್ಷ ಮಾರ್ಟಿನ್ ಜೋರ್ಜ್ ಮುಖ್ಯ ಅತಿಥಿಯಾಗಿರುವರು. ಹಲವರು ಉಪಸ್ಥಿತರಿರುವರು.
ಅಪರಾಹ್ನ ೨ ಗಂಟೆಗೆ ಮಹಿಳಾ ಸಮ್ಮೇಳನ ನಡೆಯಲಿದ್ದು, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದು ಕೃಷ್ಣ ಉದ್ಘಾಟಿಸುವರು. ಕೆ.ಪಿ.ಸಿ.ಸಿ. ಸದಸ್ಯೆ ಡಾ. ಎಂ. ಹರಿಪ್ರಿಯ ಮುಖ್ಯ ಭಾಷಣ ಮಾಡುವರು. ಬಳಿಕ ವನಿತಾ ಫೋರಂ ಕಾಸರಗೋಡು ಇವರಿಂದ ಮೆಗಾ ತಿರುವಾದಿರ, ಸಂಜೆ ೪ಕ್ಕೆ ಸಮ್ಮೇಳನ ನಗರದಿಂದ ಪಾಲಕುನ್ನುಗೆ ಮೆರವಣಿಗೆ ನಡೆಯಲಿದೆ. ಬಳಿಕ ನಡೆಯುವ ಸಾರ್ವಜನಿಕ ಸಮ್ಮೇಳನವನ್ನು ಸಂಸದ ಕೆ. ಮುರಳೀಧರನ್ ಉದ್ಘಾಟಿಸುವರು. ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣನ್ ಪೆರಿಯ ಮುಖ್ಯ ಭಾಷಣ ಮಾಡುವರು.
ರಾತ್ರಿ ೮ಕ್ಕೆ ಕಲಾ ಸಂಧ್ಯಾ ನಡೆಯಲಿದೆ. ೧೫ರಂದು ಬೆಳಿಗ್ಗೆ ೯ಕ್ಕೆ ಸಹಕಾರಿ ಸೆಮಿನಾರ್ ನಡೆಯಲಿದ್ದು, ಇರಿಕ್ಕೂರ್ ಶಾಸಕ ಸಜೀವ್ ಜೋಸೆಫ್ ಉದ್ಘಾಟಿಸುವರು. ೧೧ಕ್ಕೆ ಬೀಳ್ಕೊಡುಗೆ, ಸಮಾರೋಪ ಕಾರ್ಯಕ್ರಮವನ್ನು ಕೆಪಿಸಿಸಿ ಅಧ್ಯಕ್ಷ ಕೆ. ಸುಧಾಕರನ್ ಉದ್ಘಾಟಿಸುವರು.