ಕೊಂಡೆವೂರು ಮಠದಲ್ಲಿ ಶ್ರೀ ಶಾರದಾ ಪ್ರತಿಷ್ಠೆ, ಸರಸ್ವತಿ ಹವನ

ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ನವರಾತ್ರಿ ಮಹೋತ್ಸವ ಪ್ರಯುಕ್ತ “ಸರಸ್ವತೀ ಹವನ” ನಡೆಯಿತು. ಈ ಸಂದರ್ಭದಲ್ಲಿ ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು. ನಾಳೆ ದುರ್ಗಾಷ್ಟಮಿಯಂದು ವಿದುಷಿ ಉಷಾ ಈಶ್ವರ್ ಭಟ್ ಕಾಸರಗೋಡು ಮತ್ತು ಬಳಗದವರಿಂದ ಕರ್ನಾಟಕ ಶಾಸ್ತಿçÃಯ ಸಂಗೀತ ಕಾರ್ಯಕ್ರಮ ನಡೆಯಲಿದೆ. 12ರಂದು ಬೆಳಿಗ್ಗೆ 7.30 ಕ್ಕೆ ವಿದ್ಯಾರಂಭ, 8ಕ್ಕೆ ವಾಹನಪೂಜೆ ಬಳಿಕ ಗಾಯತ್ರಿ, ಶ್ರಾವಣ್ಯ ಕೊಂಡೆವೂರು ಇವರ ಶಾಸ್ತಿçÃಯ ಸಂಗೀತ ಕಾರ್ಯಕ್ರಮ, ಮಧ್ಯಾಹ್ನ ಪೂಜೆಯ ನಂತರ ಶ್ರೀ ಮಠದ ನಕ್ಷತ್ರವನದಲ್ಲಿರುವ ಆನಂದತೀರ್ಥ ಪುಷ್ಕರಿಣಿಯಲ್ಲಿ ಶ್ರೀ ಶಾರದಾ ವಿಸರ್ಜನೆ ನಡೆಯಲಿರುವುದು.

RELATED NEWS

You cannot copy contents of this page