ಕೊಲ್ಲಂಪಾಡಿ ಪರಿವಾರ ಬಂಟ ತರವಾಡು ಧರ್ಮನೇಮ 11ರಿಂದ

ಅಣಂಗೂರು: ಕೊಲ್ಲಂಪಾಡಿ ತುರ್ತಿ ರಸ್ತೆ ಪರಿವಾರ ಬಂಟ ಸಮುದಾಯದ ಕೊಲ್ಲಂಪಾಡಿ ಪರಿವಾರ ಬಂಟ ತರವಾಡು ಸೇವಾ ಸಮಿತಿ ಆಶ್ರಯದಲ್ಲಿ ಧರ್ಮದೈವಗಳ ನೇಮೋತ್ಸವ ಈ ತಿಂಗಳ 11, 12ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
11ರಂದು ಬೆಳಿಗ್ಗೆ 8.30ಕ್ಕೆ ಗಣಪತಿ ಹೋಮ, 10ಕ್ಕೆ ಶ್ರೀ ಧೂಮಾವತಿ ಹಾಗೂ ಪರಿವಾರ ದೈವಗಳಿಗೆ ತಂಬಿಲ, 11ರಿಂದ ಮುಡಿಪು ಪೂಜೆ, 1ರಿಂದ ಅನ್ನ ಸಂತರ್ಪಣೆ, ಸಂಜೆ 4.30ಕ್ಕೆ ಭಜನೆ, 6ಕ್ಕೆ ಭಂಡಾರ ಇಳಿಯುವುದು, ದೈವ ಕೋಲಕ್ಕೆ ಚಾಲನೆ, ಸಹದೈವ ಕೋಲ, ರಾತ್ರಿ 8ಕ್ಕೆ ಅನ್ನ ಸಂತರ್ಪಣೆ, 9ರಿಂದ ಪಂಜುರ್ಲಿ, ಕಲ್ಲುರ್ಟಿ ದೈವಗಳ ಕೋಲ ನಡೆಯಲಿದೆ.
12ರಂದು ಬೆಳಿಗ್ಗೆ 5ಕ್ಕೆ ಕೊರತಿ ದೈವದ ಕೋಲ, 10ಕ್ಕೆ ಶ್ರೀ ಧೂಮಾವತಿ ದೈವದ ಧರ್ಮನೇಮ, 1ರಿಂದ ಅನ್ನ ಸಂತರ್ಪಣೆ, ಸಂಜೆ 4ಕ್ಕೆ ಗುಳಿದ ದೈವ ಕೋಲ ನಡೆಯಲಿದೆ.

You cannot copy contents of this page