ಕ್ಷೇತ್ರಗಳು ಭಕ್ತಜನ ಸೌಹಾರ್ದ ಕೇಂದ್ರಗಳಾಗಬೇಕು- ಎಂ.ಆರ್. ಮುರಳಿ
ಕುಂಬಳೆ: ಕ್ಷೇತ್ರಗಳು ಭಕ್ತಜನರ ಸೌಹಾರ್ದ ಸ್ಥಳಗಳಾಗಿ ಬದಲಾಗ ಬೇಕೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಎಂ.ಆರ್. ಮುರಳಿ ನುಡಿದರು. ಕುಂಬಳೆ ಕಣಿಪುರ ಶ್ರೀ ಗೋಪಾಲಕೃಷ್ಣ ಕ್ಷೇತ್ರದ ಹೊಸ ಸೇವಾ ಕೌಂಟರ್ ಉದ್ಘಾಟಿಸಿ ಅವರು ಮಾತ ನಾಡುತ್ತಿದ್ದರು. ಭಕ್ತರಿಗೆ ಮೂಲಭೂತ ಸೌಕರ್ಯ ಒದಗಿಸಲು ಗಮನ ಹರಿಸಿದರೆ ಕ್ಷೇತ್ರಗಳು ಪೂರ್ಣತೆಗೆ ತಲಪುವುದಾಗಿ ಅವರು ನುಡಿದರು.
ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿ ರುವ ಕಣಿಪುರ ಕ್ಷೇತ್ರದಲ್ಲಿ ನಡೆದಿರುವುದು ಮಾದರಿಯಾಗಿಸಬಹುದಾದ ನವೀಕರಣೆ ಚಟುವಟಿಕೆಗಳಾಗಿದೆ ಎಂದು ಎಂ.ಆರ್. ಮುರಳಿ ನುಡಿದರು. ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಘುನಾಥ ಪೈ ಅಧ್ಯಕ್ಷತೆ ವಹಿಸಿದರು. ಪಾರಂಪರ್ಯ ಟ್ರಸ್ಟಿ ನ್ಯಾಯವಾದಿ ರಾಜೇಂದ್ರ ರಾವ್, ಅಸಿ. ಕಮಿಶನರ್ ಪ್ರದೀಪ್ ಕುಮಾರ್, ಏರಿಯಾ ಸಮಿತಿ ಸದಸ್ಯ ಶಂಕರ್ ರೈ, ಚಕ್ರಪಾಣಿ ದೇವ ಪೂಜಿತ್ತಾಯ ಮಾತನಾಡಿದರು. ಕ್ಷೇತ್ರ ಎಕ್ಸಿಕ್ಯೂಟಿವ್ ಅಧಿಕಾರಿ ಕೆ. ಪಿ. ಸುನಿಲ್ ಕುಮಾರ್ ಸ್ವಾಗತಿಸಿ, ದಾಮೋದರನ್ ದೇಲಂಪಾಡಿ ವಂದಿಸಿದರು.