ಗಲ್ಫ್‌ನಿಂದ ತಂದೆ ಊರಿಗೆ ತಲುಪುವ ಗಂಟೆಗಳ ಮುಂಚೆ ಪುತ್ರ ನಾಪತ್ತೆ
ಕುಂಬಳೆ: ತಂದೆ ಗಲ್ಫ್‌ನಿಂದ ಊರಿಗೆ ತಲುಪಲು ಗಂಟೆಗಳು ಮಾತ್ರ ಬಾಕಿಯಿರುವಂತೆ ಹತ್ತನೇ ತರಗತಿ ವಿದ್ಯಾರ್ಥಿಯಾದ ಪುತ್ರ ನಾಪತ್ತೆಯಾದ ಬಗ್ಗೆ ದೂರ ಲಾಗಿದೆ. ಘಟನೆ ಬಗ್ಗೆ ತಂದೆ ನೀಡಿದ ದೂರಿನಂತೆ ಕುಂಬಳೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಕುಂಬಳೆ ಬಳಿಯ ಮಾವಿನಕಟ್ಟೆ ಪಿ.ವಿ.ಎಸ್ ಕಂಪೌಂಡ್‌ನ ಸಾಜುದ್ದೀನ್‌ರ ಪುತ್ರ, ಮುಟ್ಟಂನ ಖಾಸಗಿ ಶಾಲೆ ವಿದ್ಯಾರ್ಥಿಯಾದ ಮುಹಮ್ಮದ್ ಶಾಕಿಬ್ (೧೫) ನಾಪತ್ತೆಯಾದ ಬಾಲಕನಾಗಿದ್ದಾನೆ.
ಕಪ್ಪು ಬಣ್ಣದ ಪ್ಯಾಂಟ್ ಹಾಗೂ ಶರ್ಟ್ ಧರಿಸಿ ನಿನ್ನೆ ಸಂಜೆ ೫.೪೫ರ ವೇಳೆ ಆಟವಾಡಲು ಹೋಗುವು ದಾಗಿ ತಿಳಿಸಿ ಮನೆಯಿಂದ ತೆರಳಿದ್ದನು. ಈ ಸಂದರ್ಭದಲ್ಲಿ ತಾಯಿ ಹಾಗೂ ಸಹೋದರ ಗಲ್ಫ್‌ನಿಂದ ಬರುತ್ತಿದ್ದ ಸಾಜು ದ್ದೀನ್‌ರನ್ನು ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ಅವರು ಮರಳಿ ಮನೆಗೆ ತಲುಪಿದಾಗಲೇ ಪುತ್ರ ನಾಪತ್ತೆಯಾದ ವಿಷಯ ತಿಳಿದು ಬಂದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಬಾಲಕನ ಕುರಿತು ಯಾವುದಾದರೂ ಮಾಹಿತಿ ಲಭಿಸಿದರೆ ತಿಳಿಸುವಂತೆ ಕುಂಬಳೆ ಪೊಲೀಸರು ವಿನಂತಿಸಿದ್ದಾರೆ.