ಗಾಜಾ ಪಟ್ಟಿಯನ್ನು ಸ್ಮಶಾನ ಸದೃಶಗೊಳಿಸಿದ ಇಸ್ರೇಲ್
ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿದಾಳಿ ಆರಂಭಿಸಿರುವ ಇಸ್ರೇಲ್ ಗಾಜಾಪಟ್ಟಿ ನಗರವನ್ನು ಸತತ ಬಾಂಬ್ ದಾಳಿಯಿಂದ ಸ್ಮಶಾನಸದೃಶ್ಯಗೊಳಿಸಿದೆ.
೨೦೦ ಬಾರಿ ಇಸ್ರೇಲ್ ಯುದ್ಧ ವಿಮಾನ ಗಾಜಾಪಟ್ಟಿ ಮೇಲೆ ಬಾಂಬ್ ಗಳ ಸುರಿಮಳೆಗರೆದಿದೆ. ಸುಮಾರು ೧೨ ಸಾವಿರ ಕಟ್ಟಡಗಳನ್ನು ಧ್ವಂಸಗೊಳಿಸಿದೆ. ಈ ಯುದ್ಧದಲ್ಲಿ ಸುಮಾರು ೩೫೦೦ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿ ದ್ದಾರೆ. ಲಕ್ಷಾಂತರ ಮಂದಿ ಗಾಯಗೊಂ ಡಿದ್ದಾರೆ. ಹಮಾಸ್ ಮೇಲೆ ಇಸ್ರೇಲ್ ಪ್ರತಿದಾಳಿ ಆರಂಭಿಸಿರುವಂತೆಯೇ ಇತ್ತ ಲೆಬನಾನ್ ಮತ್ತು ಸಿರಿಯಾ ಇಸ್ರೇಲ್ ಮೇಲೆ ದಾಳಿ ಆರಂಭಿಸಿದೆ.
ಇಸ್ರೇಲ್‌ನ ಒಳನುಗ್ಗಿರುವ ಹಮಾಸ್ ಉಗ್ರರು ಈಗಲೂ ಕೆಲವು ಇಸ್ರೇಲ್ ಕುಟುಂಬಗಳ ಮನೆಯಲ್ಲಿದ್ದು, ಅವರು ಆ ಕುಟುಂಬಗಳನ್ನು ಒತ್ತೆಯಾಗಿಸಿಕೊಂಡು ಅವರಿಗೆ ಪ್ರಾಣ ಬೆದರಿಕೆಯೊಡ್ಡುತ್ತಿದೆಯೆಂಬ ಮಾಹಿತಿಯೂ ಬಹಿರಂಗಗೊಂಡಿದೆ.
ಹಮಾಸ್ ಉಗ್ರರು ಸುಮಾರು ೪೦ರಷ್ಟು ಮಕ್ಕಳನ್ನು ಶಿರಚ್ಚೇಧನ ಮಾಡಿ ಕ್ರೌರ್ಯವೆಸಗಿದ್ದಾರೆಂಬ ಭಯಾನಕ ವರದಿಯೂ ಇನ್ನೊಂದೆಡೆ ಹೊರಬಂ ದಿದೆ. ಇದನ್ನು ಅಮೆರಿಕಾ ಸೇರಿದಂತೆ ಇತರ ಹಲವು ದೇಶಗಳೂ ಖಂಡಿಸಿವೆ. ಇಸ್ರೇಲ್ ನಾಗರಿಕರನ್ನು ಹಮಾಸ್ ಉಗ್ರರು ಬಂಧಿಯಾಗಿರಿಸಿರುವ ಪ್ರದೇಶಗಳಲ್ಲಿ ಇಸ್ರೇಲ್ ಹೆಚ್ಚಿನ ಬಾಂಬ್ ದಾಳಿ ನಡೆಸುವುದನ್ನು ನಿಲ್ಲಿಸಿ ಅಂತಹ ಪ್ರದೇಶಗಳಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸುವ ಮೂಲಕ ಒತ್ತೆಯಾಳು ಗಳನ್ನು ಸುರಕ್ಷಿತವಾಗಿ ರಕ್ಷಿಸುವ ಪ್ರಯತ್ನ ಇನ್ನೊಂದೆಡೆ ಆರಂಭಿಸಿದೆ. ಮಾತ್ರವಲ್ಲ ಹಮಾಸ್ ಅಡಗುದಾಣಗಳನ್ನು ಗುರು ತಿಸಿ ಅವುಗಳನ್ನು ಒಂದೊಂದಾಗಿ ನಾಶ ಗೊಳಿಸತೊಡಗಿದೆ. ಇಸ್ರೇಲ್‌ಗೆ ಬೆಂ ಬಲ ನೀಡಲು ಅಮೆರಿಕಾದ ನೌಕಾ ಪಡೆಯೂ ಮೆಡಿಟರೇನಿಯನ್ ಸಮುದ್ರಕ್ಕೆ ಈಗಾಗಲೇ ಬಂದು ಸೇರಿದೆ.