ಗುರುಸ್ವಾಮಿ ನಿಧನ
ಕಾಸರಗೋಡು: ಅಣಂಗೂರು ಜೆ.ಪಿ ನಗರ ನಿವಾಸಿ ಬಾಬು ಪೂಜಾರಿ (74) ನಿಧನ ಹೊಂದಿದರು. ಇವರು ಶ್ರೀ ಅಯ್ಯಪ್ಪ ಗುರುಸ್ವಾಮಿಯೂ, ಜೆ.ಪಿ ನಗರ ಶ್ರೀ ಕೊರಗಜ್ಜ ಸನ್ನಿಧಿಯ ಮೊಕ್ತೇಸರರೂ ಆಗಿದ್ದರು. ಇತ್ತೀಚೆಗೆ ಇವರು ಬಿದ್ದು ತಲೆಗೆ ಗಂಭೀರ ಗಾಯಗೊಂಡು ಕಾಸರಗೋಡಿನ ಆಸ್ಪತ್ರೆಯಲ್ಲಿ ದಾಖ ಲಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿ ಯಾಗದೆ ನಿನ್ನೆ ನಿಧನ ಸಂಭವಿಸಿದೆ.
ಮೃತರು ಪತ್ನಿ ಸುಂದರಿ, ಮಕ್ಕ ಳಾದ ರೂಪ, ದೀಪ, ಸಂತೋಷ್, ಅಳಿಯ ರಮೇಶ್ (ಬೆಳ್ಳೂರು ಪಂಬೆಜಾಲ್), ಸೊಸೆ ಭಾರತಿ, ಸಹೋದರ-ಸಹೋದರಿಯರಾದ ನಾರಾಯಣ, ಕೃಷ್ಣ, ರಾಜ, ಸುಶೀಲ, ವನಜಾ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಇನ್ನೋರ್ವ ಅಳಿಯ ಪೂವಪ್ಪ ಪೂಜಾರಿ ಈ ಹಿಂದೆ ನಿಧನರಾಗಿದ್ದಾರೆ.