ಗೃಹಿಣಿ ಕುತ್ತಿಗೆಯಿಂದ ಸರ ಎಗರಿಸಿ ದುಷ್ಕರ್ಮಿಗಳು ಪರಾರಿ: ತನಿಖೆ ತೀವ್ರ

ಪೆರ್ಲ: ರಸ್ತೆ ಬದಿ ನಡೆದು ಹೋಗುತ್ತಿದ್ದ ಗೃಹಿಣಿಯ ಕುತ್ತಿಗೆಯಿಂದ ಚಿನ್ನದ ಸರ ಎಗರಿಸಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಶೇಣಿ ಪರಿಸರದಲ್ಲಿ ಭಾರೀ ಆತಂಕ ಸೃಷ್ಟಿಸಿದೆ.

ಪೆರ್ಲದ ಪಿಎಚ್‌ಸಿಯಿಂದ ಮೊನ್ನೆ ಔಷಧಿ ಖರೀದಿಸಿ ಮನೆಗೆ ಮರಳುತ್ತಿದ್ದ ಶೇಣಿ ನಿವಾಸಿ ಕುಂಞಿ ನಾಯ್ಕರ ಪತ್ನಿ ಸುಲೋಚನ (54) ಎಂಬವರ  ಕುತ್ತಿಗೆಯಿಂದ ದುಷ್ಕರ್ಮಿಗಳು ಒಂದೂಕಾಲು ಪವನ್‌ನ ಚಿನ್ನದ ಸರ ಎಗರಿಸಿದ್ದಾರೆ.

ರಸ್ತೆ ಬದಿ ನಡೆದು ಹೋಗು ತ್ತಿದ್ದ ಸುಲೋಚನರನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ದೂಡಿ ಹಾಕಿದ್ದಾರೆ. ಈ ವೇಳೆ ಬಿದ್ದ ಅವರನ್ನು ಮೇಲಕ್ಕೆತ್ತುವ ನಾಟಕವಾಡಿ ಅವರ ಕುತ್ತಿಗೆ ಯಿಂದ ಸರ ಎಗರಿಸಿ ತಂಡ ಪರಾರಿಯಾಗಿದೆಯೆಂದು ದೂರಲಾಗಿದೆ.  ಘಟನೆ ಬಗ್ಗೆ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿ ದುಷ್ಕರ್ಮಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.

You cannot copy contents of this page