ಚಂದ್ರಗಿರಿ ಹೊಳೆಗೆ ಹಾರಿದ ವ್ಯಕ್ತಿ ಇನ್ನೂ ನಾಪತ್ತೆ

ಕಾಸರಗೋಡು: ಚಂದ್ರಗಿರಿ ಸೇತುವೆಯಿಂದ ನಿನ್ನೆ ಮಧ್ಯಾಹ್ನ ಗಂಡಸೋರ್ವ ಎಲ್ಲರೂ ನೋಡುತ್ತಿದ್ದಂತೆ ಹೊಳೆಗೆ ಹಾರಿದ್ದಾರೆ. ಆ ಬಗ್ಗೆ ಲಭಿಸಿದ ಮಾಹಿತಿಯಂತೆ ಕಾಸರಗೋಡು ಅಗ್ನಿಶಾಮಕದಳ ಮತ್ತು ಪೊಲೀಸರು  ಸ್ಥಳಕ್ಕಾಗಮಿಸಿ ಊರವರ ಸಹಾಯದಿಂದ ವ್ಯಾಪಕ ಶೋಧ ನಡೆಸಿದರೂ ನಾಪತ್ತೆಯಾದ ವ್ಯಕ್ತಿಯ ನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.  ಶೋಧ ಕಾರ್ಯಾಚರಣೆ ಇಂದೂ ಮುಂದುವರಿಯುತ್ತಿದೆ. ಹೊಳೆಗೆ ಹಾರಿದ ವ್ಯಕ್ತಿ ಯಾರೆಂದು ಈತನಕ ತಿಳಿದುಬಂದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

RELATED NEWS

You cannot copy contents of this page