ಚಿನ್ನದ ವ್ಯವಹಾರದ ಹೆಸರಲ್ಲಿ ರಾತ್ರಿ ವೇಳೆ ಯುವಕನ ಅಪಹರಣ: ತಾಸಿನೊಳಗಾಗಿ ಇಬ್ಬರ ಸೆರೆ
ಕಾಸರಗೋಡು: ಚಿನ್ನದ ವ್ಯವ ಹಾರಕ್ಕೆ ಸಂಬಂಧಿಸಿ ತಂಡವೊಂದು ಯುವಕನನ್ನು ಅಪಹರಿಸಿ, ಅದು ನಡೆದ ಕೆಲವೇ ತಾಸುಗಳೊಳಗಾಗಿ ಅಪಹರಣಗಾರರನ್ನು ಪೊಲೀಸರು ಬಂಧಿಸುವವಲ್ಲೂ ಸಫಲರಾಗಿದ್ದಾರೆ.
ಕೂಡ್ಲು ಮೀಪುಗುರಿ ಗಲ್ಫ್ ಕ್ವಾರ್ಟರ್ಸ್‌ನ ಅಹಮ್ಮದ್ ಜಾಬೀರ್ (೩೬) ಎಂಬ ಯುವಕ ಸ್ನೇಹಿತನೋರ್ವನೊಂದಿಗೆ ಮೊನ್ನೆ ರಾತ್ರಿ ೧೨ ಗಂಟೆಗೆ ನಿಂತಿದ್ದ ವೇಳೆ ಅಲ್ಲಿಗೆ ಕಾರಿನಲ್ಲಿ ಬಂದ ತಂಡ ಅಹಮ್ಮದ್ ಜಾಬೀರ್‌ನನ್ನು ಕಾರಿಗೇರಿಸಿ ಅಪಹರಿಸಿದೆ ಎಂದು ಆರೋಪಿಸಲಾಗಿದೆ. ಆ ವೇಳೆ ಅಹಮ್ಮದ್ ಜಾಬೀರ್ ಜತೆ ಇದ್ದ ಆತನ ಸ್ನೇಹಿತನ ಮೇಲೆ ಅಪಹg ಣಗಾರರು ಹಲ್ಲೆ ನಡೆಸಿ ಆತನನ್ನು ಅಲ್ಲೇ ಬಿಟ್ಟು ಹೋದರೆನ್ನಲಾಗಿದೆ. ಈ ಮಧ್ಯ ಅಹಮ್ಮದ್ ಜಾಬೀರ್‌ನ ತಾಯಿ ಕಾಸರಗೋಡು ಪೊಲೀಸ್ ಠಾಣೆಗೆ ಬಂದು ತನ್ನ ಪುತ್ರ ನಾಪತ್ತೆಯಾಗಿರುವುದಾಗಿ ದೂರು ನೀಡಿದರು. ಈ ಮಧ್ಯೆ ಅಪಹರಣ ಗಾರರು ಅಹಮ್ಮದ್ ಜಾಬೀರ್‌ನನ್ನು ಮುಂಜಾನೆ ಸುಮಾರು ೪ ಗಂಟೆ ವೇಳೆಗೆ ನಗರದ ಹೊಸ ಬಸ್ ನಿಲ್ದಾಣದ ಪರಿಸರದಲ್ಲಿ ಉಪೇಕ್ಷಿಸಿ ಪರಾರಿಯಾದರೆನ್ನಲಾಗಿದೆ. ಮೊಹ ಮ್ಮದ್ ಜಾಬೀರ್‌ನನ್ನು ಅಪಹರಿಸಿದವರ ಪತ್ತೆಗಾಗಿ ಪೊಲೀಸರು ತಕ್ಷಣ ಕಾರ್ಯಾಚರಣೆಗಿಳಿದು, ಘಟನೆ ನಡೆದ ಕೆಲವೇ ತಾಸುಗಳೊಳಗಾಗಿ ಅಪಹರಣ ಗಾರರಿಬ್ಬರನ್ನು ಬಂಧಿಸುವಲ್ಲೂ ಸಫಲರಾಗಿದ್ದರು.ಅಣಂಗೂರು ನಿವಾಸಿಗಳಾದ ಅಸರುದ್ದೀನ್ (೨೬) ಮತ್ತು ಖಾದರ್ (೨೫) ಎಂಬವರು ಬಂಧಿತರಾದ ಆರೋಪಿಗಳಾಗಿದ್ದಾರೆ. ಕಾಸರಗೋಡು ಪೊಲೀಸ್ ಇನ್ಸ್‌ಪೆಕ್ಟರ್ ಪಿ. ಅಜಿತ್ ಕುಮಾರ್‌ನ ನೇತೃತ್ವದ ಪೊಲೀಸರ ತಂಡ ಇವರನ್ನು ಬಂಧಿಸಿದೆ.
ಅಹಮ್ಮದ್ ಜಾಬೀರ್ ಈ ಹಿಂದೆ ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದನು. ಅಲ್ಲಿಂದ ಆತ ಇತ್ತೀಚೆಗಷ್ಟೇ ಊರಿಗೆ ಹಿಂತಿರುಗಿದ್ದರೆಂದೂ, ಆ ವೇಳೆ ಆತ ಚಿನ್ನ ತಂದಿದ್ದನೆಂದು, ಆ ಚಿನ್ನದ ವ್ಯವಹಾರ ಹೆಸರಲ್ಲಿ ಆತನನ್ನು ಅಪಹರಿಸಲಾ ಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಅಹಮ್ಮದ್ ಜಾಬೀರ್‌ನ ಅಪಹರಣ ಸಂ ದರ್ಭದಲ್ಲೇ ನಗರದ ಕೋ ಟೆಕಣಿಯಲ್ಲಿ ರಸ್ತೆಯಲ್ಲಿ ಕೆಲವೊಂದು ರಕ್ತದ ಕಲೆಗಳೂ ಪತ್ತೆಯಾಗಿತ್ತು. ಅದು ತೀವ್ರ ಪೊಲೀಸರ ಶಂಕೆಗೂ ಎಡೆಮಾಡಿತ್ತು. ಆ ಬಗ್ಗೆ ಪೊಲೀ ಸರು ನಡೆಸಿದ ತನಿಖೆಯಲ್ಲಿ ಆ ರಕ್ತದ ಕಲೆಗೂ ಅಹಮ್ಮದ್ ಜಾಬೀರ್‌ನ ಅಪಹರಣಕ್ಕೂ ಯಾವುದೇ ರೀತಿಯ ಸಂ ಬಂಧವಿಲ್ಲವೆಂದು ಕಂಡು ಕೊನೆಗೆ ನಿಟ್ಟುಸಿರು ಬಿಟ್ಟರು.