ಚಿಪ್ಪಾರು: ಸಂಚಾರ ಸಮಸ್ಯೆಯಾಗಿದ್ದ ರಸ್ತೆಯಲ್ಲಿ ಸಿಪಿಎಂ ಶ್ರಮದಾನ; ಪೊದೆ ತೆರವು

ಪೈವಳಿಕೆ: ಲಾಲ್‌ಬಾಗ್-ಕುರುಡ ಪದವು ರಸ್ತೆಯ ಚಿಪ್ಪಾರು, ಅಡ್ಕತ್ತಿ ಮಾರ್‌ನಲ್ಲಿ ಸಿಪಿಎಂ ಕಾರ್ಯಕರ್ತರು ಶ್ರಮದಾನ ನಡೆಸಿ ಸಂಚಾರ ಸುಗಮಗೊಳಿಸಿದರು. ರಸ್ತೆ ಬದಿಗಳಲ್ಲಿ ಪೊದೆಗಳು ತುಂಬಿ ವಾಹನಗಳಿಗೆ ಸಂಚರಿಸಲು ಹಾಗೂ ಅಗಲಕಿರಿದಾದ ತಿರುವುಗಳಲ್ಲಿ ಬಸ್‌ಗಳಿಗೆ ಸಾಗಲು  ಸಮಸ್ಯೆಯಾಗುತ್ತ್ತಿದ್ದ ಹಿನ್ನೆಲೆಯಲ್ಲಿ ಶ್ರಮದಾನ ನಡೆಸಿ ಪೊದೆಗಳನ್ನು ಕಡಿದು ತೆರವುಗಳಿಸಿದ್ದಾರೆ. ಅಲ್ಲದೆ ರಸ್ತೆ ಬದಿಗೆ ಜೆಸಿಬಿ ಮೂಲಕ ಅಗೆದು ಮಣ್ಣು ಹಾಕಿ ಅಗಲಗೊಳಿಸಿದ್ದಾರೆ. ಚಿಪ್ಪಾರು, ಅಡ್ಕತ್ತಿಮಾರ್, ಖಂಡಿಗೆ,ಕಡೆಂಕೋಡಿ, ಅಮ್ಮೇರಿ ಮೊದಲಾದ ಸ್ಥಳಗಳಲ್ಲಿ ರಸ್ತೆ ದುರಸ್ತಿ ನಡೆಸಲಾಗಿದೆ. ಸಿಪಿಎಂ ಚಿಪ್ಪಾರು  ಘಟಕದ ಕಾರ್ಯಕರ್ತರು ಶ್ರಮದಾನ ನಡೆಸಿದ್ದಾರೆ. ಅಬ್ದುಲ್ ರಜಾಕ್ ಚಿಪ್ಪಾರು, ಖಲೀಲ್ ನಾರ್ಣಕಟ್ಟೆ, ಜಯಶ್ರೀ ಕರುವೋಳು, ರಜಿಯ ಚಿಪ್ಪಾರು ನೇತೃತ್ವ ನೀಡಿದರು.  ಇವರ ಕಾರ್ಯವನ್ನು ಸಿಐಟಿಯು ಮುಖಂಡ ಚಂದ್ರ ನಾಯ್ಕ್ ಮಾನಿಪ್ಪಾಡಿ ಶ್ಲಾಘಿಸಿದರು.

RELATED NEWS

You cannot copy contents of this page