ಜನರಲ್ ಆಸ್ಪತ್ರೆಗೆ ಮಾರ್ಚ್: 85 ಬಿಜೆಪಿ ಕಾರ್ಯಕರ್ತರ ವಿರುದ್ಧ ಕೇಸು
ಕಾಸರಗೋಡು: ಆರೋಗ್ಯ ಸಚಿವೆ ವೀಣಾ ಜೋರ್ಜ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ನಿನ್ನೆ ಕಾಸರಗೋಡು ಜನರಲ್ ಆಸ್ಪತ್ರೆಗೆ ನಡೆಸಿದ ಮಾರ್ಚ್‌ಗೆ ಸಂಬಂಧಿಸಿ 85 ಮಂದಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂ ಡಿದ್ದಾರೆ. ಸಂಘಟಿತರಾಗಿ ಬಂದು ರಸ್ತೆ ತಡೆ, ಸಾರಿಗೆ ಅಡಚಣೆ, ಸಾರ್ವಜನಿಕ ಸಂಚಾರಕ್ಕೆ ತಡೆಯೊಡ್ಡುವಿಕೆ ಇತ್ಯಾದಿ ಆರೋಪದಂತೆ ಕೇಸು ದಾಖಲಿ ಸಲಾಗಿದೆ. ಪಿ.ಆರ್. ಸುನಿಲ್, ಲೋಕೇಶ್ ನೋಂಡಾ, ಗುರುಪ್ರ ಸಾದ್, ಸಜೀವನ್, ಮನುಲಾಲ್ ಮೇಲತ್ತ್, ಸಾಗರ್ ಚಾತಮತ್ತ್, ಶ್ರೀಧರನ್, ಪ್ರದೀಪ್ ಕುಟ್ಟಕಣಿ, ಪ್ರಮೀಳಾ ಮಜಲ್, ರಮೇಶನ್, ಪ್ರಸಾದ್,ರವೀಂದ್ರನ್, ಸತೀಶ್ಚಂದ್ರ ಭಂಡಾರಿ ಸಹಿತ ೮೫ ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.