ಜಿಲ್ಲಾ ಪಂಚಾಯತ್ನ ಜೈವಿಕ ವೈವಿಧ್ಯ ಪುರಸ್ಕಾರ ವಿತರಣೆ ನಾಳೆ
ಕಾಸರಗೋಡು: ಜಿಲ್ಲಾ ಪಂಚಾಯತ್ನ ಜೈವಿಕ ವೈವಿಧ್ಯ ಪುರಸ್ಕಾರಗಳ ವಿತರಣೆ ನಾಳೆ ನಡೆಯಲಿದೆ. ಎರಿಂಞಿಪ್ಪುಳ ಪೊಲಿಯಂತುರುತ್ತ್ ಇಕೋ ವಿಲ್ಲೇಜ್ ನಲ್ಲಿ ನಡೆಯುವ ಜೈವಿಕ ವೈವಿಧ್ಯ ಕಾರ್ಯಾಗಾರದಲ್ಲಿ ಸಚಿವ ಅಹಮ್ಮದ್ ದೇವರ್ಕೋವಿಲ್ ಪುರಸ್ಕಾರಗಳನ್ನು ವಿತರಿಸುವರೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ತಿಳಿಸಿದ್ದಾರೆ.
ಜಿಲ್ಲೆಯ ಉತ್ತಮ ಹಸಿರು ಕೃಷಿಕ ರಿಗಿರುವ ಪುರಸ್ಕಾರಕ್ಕೆ ನೀಲೇಶ್ವರ ಕಡಿಂಞಿಮೂಲೆಯ ವಿ.ವಿ. ದಿವಾಕರನ್ ಆಯ್ಕೆಗೊಂಡಿದ್ದಾರೆ. ಉದುಮದ ಕೆ.ವಿ. ಅಭಯ್ ಪ್ರತ್ಯೇಕ ಪುರಸ್ಕಾರಕ್ಕೆ ಅರ್ಹರಾಗಿದ್ದಾರೆ. ಜಿನೋ ಸೇವಿಯರ್ ಪುರಸ್ಕಾರಕ್ಕೆ ಕಣ್ಣಾಲಯಂ ನಾರಾಯಣನ್, ರವೀಂದ್ರನ್ ಕೊಡಕ್ಕಾಡ್ ಆಯ್ಕೆಗೊಂಡಿದ್ದಾರೆ. ನೂರಕ್ಕೂ ಹೆಚ್ಚು ದ್ವಿದಳ ಧಾನ್ಯಗಳ ಸಂರಕ್ಷಣೆಯನ್ನು ಪರಿಗಣಿಸಿ ಕಣ್ಣಾಲಯಂ ನಾರಾಯಣನ್ರಿಗೆ ಪುರಸ್ಕಾರ ನೀಡಲಾಗುವುದು. ವಿವಿಧ ರೀತಿಯ ಭತ್ತದ ಬೀಜ ಹಾಗೂ ಬಾಳೆಗಳ ಸಂರಕ್ಷಣೆಗಾಗಿ ರವೀಂದ್ರನ್ ಕೊಡಕ್ಕಾಡ್ರನ್ನು ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಉತ್ತಮ ಜಂತ ಸಂರಕ್ಷಕರಿಗಿರುವ ಪುರಸ್ಕಾರಕ್ಕೆ ಹರಿದಾಸ್ ಪೆರಿಯ ಅವರನ್ನು ಆಯ್ಕೆ ಮಾಡಲಾಗಿದೆ.
ಉತ್ತಮ ಹಸಿರುವ ಕಾಲೇಜಿಗೆ ಕಾಸರಗೋಡು ಸರಕಾರಿ ಕಾಲೇಜನ್ನು ಆರಿಸಲಾಗಿದೆ. ಪೊವ್ವಲ್ ಇಂಜಿನಿಯರಿಂಗ್ ಕಾಲೇಜಿಗೆ ಪ್ರತ್ಯೇಕ ಪುರಸ್ಕಾರ ಲಭಿಸುವುದು. ಹಸಿರುವ ವಿದ್ಯಾಲಯಗಳಿಗಿರುವ ಪುರಸ್ಕಾರ ಬೇಕಲ ಜಿಎಫ್ಎಸ್ಎಸ್, ಪಾಡಿಕ್ಕೀಲ್ ಜಿಯುಪಿ ಶಾಲೆಗೆ ಲಭಿಸಿದೆ. ಉತ್ತಮ ಬಿಎಂಸಿಗಳಾದ ವಲಿಯಪರಂಬ, ತೃಕ್ಕರಿಪುರ ಪಂಚಾಯತ್ಗಳನ್ನು ಆಯ್ಕೆ ಮಾಡಲಾಗಿದೆ. ಉತ್ತಮ ಸರಕಾರೇತರ ಸಂಘಟನೆಗಿರುವ ಪುರಸ್ಕಾರ ಪುಲರಿ ಅgವತ್ತ್ರಿಗೆ ಲಭಿಸಿದೆ. ನಾಳೆ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲೆಯ ಸ್ವಂತ ಜೀವಿ, ವೃಕ್ಷ, ಪುಷ್ಪ, ಪಕ್ಷಿಯನ್ನು ಜಿಲ್ಲಾಧಿಕಾರಿ ಘೋಷಿಸುವರು.