ಜೊತೆಗೆ ವಾಸಿಸುತ್ತಿದ್ದ ಮಹಿಳೆಗೆ ಹಲ್ಲೆ: ಪೊಲೀಸ್ ವಿರುದ್ಧ ಕೇಸು
ಬದಿಯಡ್ಕ: ಜತೆಗೆ ವಾಸಿಸುತ್ತಿದ್ದ ವಿವಾಹಿತ ಮಹಿಳೆಗೆ ಹಲ್ಲೆಗೈದ ಆರೋಪದಂತೆ ಪೊಲೀಸ್ ವಿರುದ್ಧ ಬದಿಯಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಬದಿಯಡ್ಕ ಪೊಲೀಸ್ ಠಾಣೆಯ ಸಿಪಿಒ, ತಿರುವನಂತಪುರ ನಿವಾಸಿಯಾದ ಬೈಜು (೩೮) ವಿರುದ್ಧ ಕೇಸು ದಾಖಲಿಸಲಾಗಿದೆ. ಪ್ರಸ್ತುತ ನೀರ್ಚಾಲು ಬಳಿ ವಾಸಿಸುತ್ತಿರುವ ಬೈಜುವಿನ ಜೊತೆಗೆ ಎರಡು ಮಕ್ಕಳ ತಾಯಿಯಾದ ಮಹಿಳೆ ಕಳೆದೆರಡು ವರ್ಷಗಳಿಂದ ವಾಸಿಸುತ್ತಿದ್ದಾಳೆನ್ನಲಾಗಿದೆ. ಇದೇ ವೇಳೆ ಬೈಜು ತನಗೆ ಹಲ್ಲೆಗೈದಿರುವುದಾಗಿ ಆರೋಪಿಸಿ ಮಹಿಳೆ ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.