ಜ್ವರ ಬಾಧಿಸಿ ಆಟೋ ಚಾಲಕ ನಿಧನ

ಮಂಜೇಶ್ವರ: ಡೆಂಗ್ಯೂಜ್ವರ ತಗಲಿ ಅಸ್ವಸ್ಥರಾಗಿದ್ದ ಆಟೋ ಚಾಲಕ ನಿನ್ನೆ ಮುಂಜಾನೆ ಮೃತಪಟ್ಟರು. ತೂಮಿನಾಡು ಸರಸ್ವತಿ ನಗರ ದಿ| ಸುಕುಮಾರ್‌ರವರ ಪುತ್ರ ಶರತ್ (43) ಮೃತಪಟ್ಟರು. ಇವರಿಗೆ ಇತ್ತೀಚೆಗೆ ಜ್ವರ ತಗಲಿತ್ತು. ಬಳಿಕ ಅದು ಡೆಂಗ್ಯೂ ಎಂದು ತಿಳಿದು ಬಂದಿದ್ದು, ಅದಕ್ಕೆ ಚಿಕಿತ್ಸೆ ಪಡೆದು ಗುಣ ಮುಖರಾಗಿದ್ದರು. ನಿನ್ನೆ ಮತ್ತೆ ಅಸ್ವಸ್ಥರಾದ ಇವರನ್ನು ದೇರಳಕಟ್ಟೆ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಧ್ಯೆ ನಿಧನರಾಗಿದ್ದಾರೆ. ತೂಮಿನಾಡಿನಲ್ಲಿ ಆಟೋ ಚಾಲಕನಾಗಿದ್ದಾರೆ. ಮೃತರು ತಾಯಿ ರಾಧಾ, ಪತ್ನಿ ಮಮತಾ, ಮಕ್ಕಳಾದ ಧನ್ಯಶ್ರೀ, ಯತಿನ್, ಸಹೋದರರಾದ ಸುಚಿನ್, ಶೈಲೇಶ್, ಸುಮಂತ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page