ಜ್ವರ ಬಾಧಿಸಿ ಬಾಲಕ ಮೃತ್ಯು
ಹೊಸದುರ್ಗ: ತೃಕರಿಪುರದಲ್ಲಿ ಜ್ವರ ಬಾಧಿಸಿ ಆರು ವರ್ಷದ ಬಾಲಕ ಮೃತಪಟ್ಟನು. ಇಡಯಿಲಕ್ಕಾಡ್ ಖಾದಿ ಕೇಂದ್ರದ ಸಮೀಪ ವಾಸಿಸುವ ಶ್ರೀರಾಜ್ ಪಾಲಕ್ಕಾಡ್-ಅಶ್ವತಿ ದಂಪತಿ ಪುತ್ರ ನಿವಾನ್ ಶ್ರೀರಾಜ್ ತೃಶೂರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಧ್ಯೆ ಮೃತಪಟ್ಟನು. ಕಲ್ಲೇಕಾಡ್ ಕೇಂದ್ರೀಯ ವಿದ್ಯಾಲಯದ ಒಂದನೇ ತರಗತಿ ವಿದ್ಯಾರ್ಥಿಯಾಗಿದ್ದು, ತಂದೆ, ತಾಯಿ, ಸಹೋದರ ಸಾವನ್ ಶ್ರೀರಾಜ್ ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾನೆ