ಟಿಪ್ಪರ್ ಚಾಲಕ ಆಸಿಫ್ನ ಮರಣ ತನಿಖೆ ಸಿಬಿಐಗೆ ಒಪ್ಪಿಸಲು ಕಾಂಗ್ರೆಸ್ ಒತ್ತಾಯ
ಪೈವಳಿಕೆ: ಬಾಯಾರು ಗಾಳಿಯಡ್ಕದ ಟಿಪ್ಪರ್ ಚಾಲಕ ಮೊಹಮ್ಮದ್ ಆಸಿಫ್‌ನ ಅಸಹಜ ಸಾವು ಕೊಲೆ ಎಂದು ಸಂಶಯÁ ತೀತ ಸಾಬೀತಾಗಿದ್ದರೂ ತನಿಖೆ ಯನ್ನು ಪೂರ್ಣಗೊಳಿಸಿ ಆರೋಪಿ ಗಳನ್ನು ನೀತಿ ಪೀಠದ ಮುಂದೆ ತರುವಲ್ಲಿ ಕೇರಳದ ಪೊಲೀಸ್ ಇಲಾಖೆ ಸಂಪೂರ್ಣ ಪರಾಜಯಗೊಂಡಿದೆ ಎಂದು ಕುಂಬಳೆ ಲಕ್ಷ್ಮಣ ಪ್ರಭು ದೂರಿದರು. ಘಟನೆ ನಡೆದು ಆರು ತಿಂಗಳಾದರೂ ಯಾವುದೇ ಪುರಾವೆ ಕಂಡುಕೊಳ್ಳಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಕೇರಳ ಪೊಲೀಸರ ಬಗೆಗಿನ ವಿಶ್ವಾಸ ನಷ್ಟವಾಗಿದ್ದು ಈ ಪ್ರಕರಣವನ್ನು ಸಿಬಿಐಗೆ ಕೂಡಲೇ ನೀಡಬೇಕೆಂದು ಅವರು ಒತ್ತಾಯಿಸಿ ದರು. ಪೈವಳಿಕೆ ಮಂಡಲ ಕಾಂಗ್ರೆಸ್ ಪ್ರತ್ಯೇಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಮಂಡಲ ಕಾಂಗ್ರೆಸ್ ಅಧ್ಯಕ್ಷ ವಸಂತ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿ ರಾಘವೇಂದ್ರ ಭಟ್ ಶುಭ ಹಾರೈಸಿದರು. ಪೈವಳಿಕೆ ಪಂಚಾಯತ್ ಕಳೆದ ಐದು ವರ್ಷ ಗಳಲ್ಲಿ ನಡೆಸಿದ ಅವ್ಯವಹಾರ ಸ್ವಜನ ಪಕ್ಷಪಾತದ ಕುರಿತ ಆರೋಪಪಟ್ಟಿ ಯನ್ನು ಶಾಜಿ ಎನ್.ಸಿ. ಮಂಡಿಸಿದರು. ನೌಶಾದ್ ಪಟ್ಲ ಸ್ವಾಗತಿಸಿ, ಶಿವರಾಮ ಶೆಟ್ಟಿ ವಂಪಿಸಿದರು. ಅಬ್ಬುಲ್ಲ ಹಾಜಿ, ವಿನ್ಸೆಂಟ್ ಡಿ ಸೋಜ, ಎಡ್ವರ್ಡ್, ಸುಬ್ರಾಯ ಸಾಯ, ಗಂಗಾಧರ ನಾಯ್ಕ, ಮೊಯ್ದೀನ್‌ಕುಂಞ್, ಲತೀಫ್ ಕೋಡಿ, ಮುಸ್ತಫ, ರೋಶನ್ ಡಿ ಸೋಜ, ಮಹಮ್ಮದ್ ಜೋಡುಕಲ್ಲು, ರಮೇಶ ಅಶ್ವ}್ಣನಿಕಟ್ಟೆ, ಭಾಗವಹಿಸಿದರು.