ಟಿ.ಪಿ. ಕೊಲೆ ಪ್ರಕರಣದ ಆರೋಪಿಗಳು ಶಿಕ್ಷೆ ಕಡಿತ ಆಗ್ರಹಿಸಿ ಸುಪ್ರೀಂಕೋರ್ಟ್‌ಗೆ

ತಿರುವನಂತಪುರ: ಟಿಪಿ ಚಂದ್ರಶೇಖ ರನ್ ಕೊಲೆ ಪ್ರಕರಣದ ಆರೋಪಿಗಳ ಶಿಕ್ಷೆ ರಿಯಾಯಿತಿ ಆಗ್ರಹಿಸಿ ಸುಪ್ರೀಂ ಕೋರ್ಟ್‌ನ್ನು ಸಮೀಪಿಸಲಾಗಿದೆ.  ಹೈಕೋರ್ಟ್‌ನ ತೀರ್ಪಿಗೆ ಸ್ಟೇ ನೀಡಬೇ ಕೆಂದು ಆಗ್ರಹಿಸಿ ಒಂದರಿಂದ ಎಂಟರ ವರೆಗಿನ ಆರೋಪಿಗಳು ನ್ಯಾಯಾಲಯ ವನ್ನು ಸಮೀಪಿಸಿದ್ದಾರೆ. ಇದರಲ್ಲಿ ಮೊದಲ ಆರು ಆರೋಪಿಗಳಾದ  ಅನೂಪ್, ಕಿರ್ಮಾಣಿ ಮನೋಜ್, ಕೊಡಿ ಸುನಿ, ರಜೀಶ್, ಶಾಫಿ, ಶಿನೋಜ್ ಎಂಬಿವರಿಗೆ ಹೈಕೋರ್ಟ್ ಅವಳಿ ಜೀವನ ಪರ್ಯಂತ ಶಿಕ್ಷೆ ನೀಡಿತ್ತು. ಕಳೆದ 12 ವರ್ಷದಿಂದ ನಾವು ಜೈಲಿನಲ್ಲಿದ್ದೇವೆಂದು ಈ ಹಿನ್ನೆಲೆಯಲ್ಲಿ ಹೈಕೋರ್ಟ್‌ನ ತೀರ್ಪನ್ನು ತುರ್ತಾಗಿ ಸ್ಟೇ ಮಾಡಿ ಶಿಕ್ಷೆಯಲ್ಲಿ ಕಡಿತ ಮಾಡಬೇಕೆಂದು ಆರೋಪಿಗಳು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾರೆ.

RELATED NEWS

You cannot copy contents of this page