ಡಾ| ಜನಾರ್ದನ ನಾಯ್ಕ್‌ರಿಗೆ ಸಂಗೀತ ಚಿಕಿತ್ಸಾ ಪ್ರಮಾಣಪತ್ರ ಪ್ರದಾನ

ಕಾಸರಗೋಡು: ಕಾಸರಗೋಡು ಜನರಲ್ ಆಸ್ಪತ್ರೆಯ ವೈದ್ಯ ಡಾ| ಜನಾರ್ದನ ನಾಯ್ಕ್ ಸಿ.ಎಚ್.  ಮಂಗಳೂರಿನ ಯೇನಪೋಯ ವೈದ್ಯಕೀಯ ಕಾಲೇಜಿನಿಂದ ‘ಸಂಗೀತ ಚಿಕಿತ್ಸೆ’ಯಲ್ಲಿ ಸರ್ಟಿಫಿಕೇಟ್‌ಗೆ ಅರ್ಹರಾದರು.

ಯೇನಪೋಯ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಜರ್ಮನಿಯ ಡಾ| ಕೋರ್ಡುಲಾ ಡಯಟ್ರಿಚ್ ಅವರ ಸಮ್ಮುಖದಲ್ಲಿ ಯೇನಪೋಯ ವಿಶ್ವವಿದ್ಯಾಲಯದ ಉಪ ಕುಲಪತಿ ಪ್ರೊ. ರಘುವೀರ ಪ್ರಮಾಣಪತ್ರ ಪ್ರದಾನಮಾಡಿದರು.

ಸಂಗೀತ ಚಿಕಿತ್ಸಾತ್ಮಕ ಪದ್ದತಿಯ ನಿರ್ದೇಶಕಿ ಪ್ರೊ. ವಿಜಯಲಕ್ಷ್ಮಿ, ಪ್ರೊ. ಪ್ರಭಾ ಅಧಿಕಾರಿ ಮತ್ತು ಇತರ ಹಲವು ಗಣ್ಯರು ಭಾಗವಹಿಸಿದರು. ಉತ್ತರ ಕೇರಳದಲ್ಲಿ ಸಂಗೀತ ಚಿಕಿತ್ಸಾ ರಂಗದಲ್ಲಿ ಪ್ರಮಾಣಪತ್ರ ಪಡೆದ ಪ್ರಥಮ ವೈದ್ಯರಾಗಿದ್ದಾರೆ ಡಾ. ಸಿ.ಎಚ್. ಜನಾರ್ದನ ನಾಯ್ಕ್.

RELATED NEWS

You cannot copy contents of this page