ಡಿಪಿಸಿ ಕಪ್ ಫುಟ್ಬಾಲ್ ಪಂದ್ಯಾಟದಲ್ಲಿ ಕುಂಬಳೆ ಪೊಲೀಸ್ ತಂಡಕ್ಕೆ ಗೆಲುವು

ಕಾಸರಗೋಡು: ಕ್ರೀಡೆಗಳು ಮಾದಕವಾಗಿರಲಿ ಎಂಬ ಸಂದೇಶ ದೊಂದಿಗೆ ಜಿಲ್ಲಾ ಪೊಲೀಸ್  ಹಮ್ಮಿ ಕೊಂಡ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಕುಂಬಳೆ ಪೊಲೀಸ್ ತಂಡ ಗೆಲುವು ಸಾಧಿಸಿದೆ. ಬೇಕಲ ಪೊಲೀಸ್ ತಂಡವನ್ನು ಒಂದರ ವಿರುದ್ಧ ಎರಡು ಗೋಲುಗಳಿಗೆ ಸೋಲಿಸಿ ಕುಂಬಳೆ ಗೆಲುವು ತನ್ನದಾಗಿಸಿದೆ.

ಡಿಐಜಿ ಕಪ್ ಪಂದ್ಯಾಟದ ಪೂರ್ವಭಾವಿಯಾಗಿ ಫುಟ್ಬಾಲ್ ಟೂರ್ನಮೆಂಟ್ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾಧಿಕಾರಿ ಕೆ. ಇಂಬಶೇಖರ್‌ರಿಂದ ಕುಂಬಳೆ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್ ಹಾಗೂ ತಂಡ ಟ್ರೋಫಿ ಪಡೆದುಕೊಂಡಿವೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ವಿ. ವಿಜಯ್ ಭಾರತ್ ರೆಡ್ಡಿ, ಅಡಿಶನಲ್ ಎಸ್‌ಪಿ ಪಿ. ಬಾಲಕೃಷ್ಣನ್ ನಾಯರ್, ಸ್ಪೆಶಲ್ ಬ್ರಾಂಚ್ ಡಿವೈ ಎಸ್‌ಪಿ ಎಂ. ಸುನಿಲ್ ಕುಮಾರ್, ಜಿಲ್ಲಾ ಕ್ರೈಂಬ್ರಾಂಚ್ ಡಿವೈಎಸ್‌ಪಿ ಟಿ. ಉತ್ತಮ್ ದಾಸ್  ಮೊದಲಾದವರು ಉಪಸ್ಥಿತರಿ ದ್ದರು. ಸಬ್ ಡಿವಿಶನ್ ಮಟ್ಟದಲ್ಲೂ ಕುಂಬಳೆ ತಂಡ ಗೆಲುವು ಸಾಧಿಸಿತ್ತು.

RELATED NEWS

You cannot copy contents of this page