ಡಿಸಿಸಿ ಅಧ್ಯಕ್ಷರ ವಿರುದ್ಧ ಕೇರಳ ಕಾಂಗ್ರೆಸ್ ನೇತಾರ ನ್ಯಾಯಾಲಯಕ್ಕೆ
ಹೊಸದುರ್ಗ: ಸಾಲ ನೀಡಿದ ಹತ್ತು ಲಕ್ಷ ರೂಪಾಯಿ ಮರಳಿ ನೀಡದೆ ಅಮಾನ್ಯ ಚೆಕ್ ನೀಡಿ ವಂಚಿಸಲಾಯಿ ತೆಂಬ ದೂರಿನಂತೆ ಡಿಸಿಸಿ ಅಧ್ಯಕ್ಷ ಪಿ.ಕೆ. ಫೈಸಲ್ ವಿರುದ್ಧ ನ್ಯಾಯಾಲಯಕ್ಕೆ ದೂರು ನೀಡಲಾಗಿದೆ. ಮಾಜಿ ಸಚಿವ ಕೆ.ಎಂ. ಮಾಣಿಯವರ ಮಗಳ ಪತಿಯೂ ಕೇರಳ ಕಾಂಗ್ರೆಸ್ ನೇತಾರನೂ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ತೃಕ್ಕರಿಪುರ ಮಂಡಲದ ಯುಡಿಎಫ್ ಅಭ್ಯರ್ಥಿಯಾಗಿದ್ದ ಎಂ.ಪಿ. ಜೋಸೆಫ್ ಕಾಕನಾಡ್ ಜ್ಯುಡೀಶಿಯಲ್ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ನೀಡಿದ್ದಾರೆ. ದೂರನ್ನು ಸ್ವೀಕರಿಸಿದ ನ್ಯಾಯಾಲಯ ಡಿಸೆಂಬರ್ ೧೯ರಂದು ಹಾಜರಾಗಬೇ ಕೆಂದು ತಿಳಿಸಿ ಸಮನ್ಸ್ ಕಳುಹಿಸಿದೆ. ೨೦೨೨ ನವೆಂಬರ್ ೨೮ರಂದು ಎರಡು ಬಾರಿಯಾಗಿ ಬ್ಯಾಂಕ್ ಖಾತೆ ಮೂಲಕ ಪಿ.ಕೆ. ಫೈಸಲ್ ಕೇರಳ ಕಾಂಗ್ರೆಸ್ ನೇತಾರನಾದ ಜೋಸೆಫ್ರಿಂದ ಒಂದು ತಿಂಗಳ ಕಾಲಾವಧಿಗೆ ೧೦ ಲಕ್ಷ ರೂಪಾಯಿ ಸಾಲ ಪಡೆದಿದ್ದರೆನ್ನಲಾ ಗಿದೆ. ಹಲವು ಬಾರಿ ಮರಳಿ ಕೇಳಿದರೂ ನೀಡದಿದ್ದಾಗ ಜೋಸೆಫ್ ಕೆಪಿಸಿಸಿ ನೇತಾರರಿಗೆ ದೂರು ನೀಡಿದ್ದಾರೆ. ಅನಂತರ ೫ ಲಕ್ಷ ರೂಪಾಯಿ ಮರಳಿ ನೀಡಲಾಯಿತು. ಬಾಕಿ ೫ ಲಕ್ಷ ರೂಪಾಯಿ ನೀಡಲು ಕಾಲಾವಧಿ ನಿಗದಿಪಡಿಸಿದ್ದರೂ ನೀಡಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯವಾದಿ ನಿತೀಶ್ ಶೇಬಾಯ್ ಮೂಲಕ ಜೋಸೆಫ್ ನ್ಯಾಯಾಲಯವನ್ನು ಸಮೀಪಿಸಿದ್ದಾರೆ.