ತೆರಿಗೆ ವಂಚಿಸಿ ಕರ್ನಾಟಕದಿಂದ ಡೀಸೆಲ್ ಸಾಗಾಟ: ವಶಪಡಿಸಿ ದಂಡ

ಮಂಜೇಶ್ವರ: ತೆರಿಗೆ ವಂಚಿಸಿ ಕರ್ನಾಟಕದಿಂದ ಕೇರಳಕ್ಕೆ ಸಾಗಿಸಲು ಯತ್ನಿಸಿದ ಡೀಸೆಲ್‌ನ್ನು ಜಿಎಸ್‌ಟಿ ವಿಭಾಗ ವಶಪಡಿಸಿದೆ.  1900 ಲೀಟರ್ ಡೀಸೆಲ್‌ನ್ನು ತಲಪಾಡಿ ಗಡಿ ಸಮೀಪದಿಂದ ವಶಪಡಿಸ ಲಾಗಿದೆ. ದಂಡ ಹಾಗೂ ಸೆಕ್ಯೂರಿಟಿ ಡಿಪಾಸಿಟ್ ಸಹಿತ 1.92 ಲಕ್ಷ ರೂ. ವಸೂಲು ಮಾಡಲಾಗಿದೆ.

ರಾಷ್ಟ್ರೀಯ ಹೆದ್ದಾರಿ ಪ್ರಥಮ ರೀಚ್ ನಿರ್ಮಾಣ ಏಜೆನ್ಸಿಯಾದ ಊರಾಂಳುಂಗಾಲ್ ಲೇಬರ್ ಕಾಂಟ್ರಾಕ್ಟರ್ಸ್ ಕೋ-ಆಪರೇಟಿವ್ ಸೊಸೈಟಿಗಾಗಿ ಈ ಡೀಸೆಲ್ ತಲುಪಿಸಲಾಗುತ್ತಿತ್ತೆನ್ನಲಾಗಿದೆ. ಇಂದು ದಂಡ ಪಾವತಿಸಲು ಕಂಪೆನಿ  ಒಪ್ಪಿದ ಹಿನ್ನೆಲೆಯಲ್ಲಿ ಗಾಡಿಯನ್ನು ಬಿಟ್ಟುಕೊಡಲಾಗಿದೆ.

RELATED NEWS

You cannot copy contents of this page